ADVERTISEMENT

ಬೇರೆ ಜಿಲ್ಲೆ ಗ್ರಾಮ ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 8:31 IST
Last Updated 10 ಮಾರ್ಚ್ 2018, 8:31 IST
ಕುಷ್ಟಗಿಯಲ್ಲಿ ಕಸಾಪ ಮತ್ತು ಹೈ.ಕ ಹೋರಾಟ ಸಮಿತಿ ಸದಸ್ಯರು ತಹಶೀಲ್ದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು
ಕುಷ್ಟಗಿಯಲ್ಲಿ ಕಸಾಪ ಮತ್ತು ಹೈ.ಕ ಹೋರಾಟ ಸಮಿತಿ ಸದಸ್ಯರು ತಹಶೀಲ್ದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು   

ಕುಷ್ಟಗಿ: ಗಡಿ ಜಿಲ್ಲೆಗಳ ಹಳ್ಳಿಗಳನ್ನು ಹೈದರಾಬಾದ್‌ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ತರುವ ರಾಜ್ಯ ಸರ್ಕಾರದ ಪ್ರಯತ್ನವನ್ನು ಹೈ.ಕ ಹೋರಾಟ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕಗಳು ಖಂಡಿಸಿವೆ.

‘ರಾಜಕೀಯ ಕಾರಣಗಳಿಗಾಗಿ ರಾಜ್ಯ ಸರ್ಕಾರ ಇಂಥ ಪ್ರಯತ್ನ ನಡೆಸಿದರೆ ಈ ಭಾಗದ ಜನರಿಗೆ ಮತ್ತೆ ಅನ್ಯಾಯವಾಗುತ್ತದೆ. ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿರುವ ಎಚ್‌.ಕೆ. ಪಾಟೀಲ ಈ ಭಾಗದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಮುಖಂಡರು ದೂರಿದರು.

ಗ್ರೇಡ್‌ 2 ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಮನವಿ ಸ್ವೀಕರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಟರಾಜ ಸೋನಾರ, ಹೈ.ಕ ಹೋರಾಟ ಸಮಿತಿ ಸಂಚಾಲಕ ವೀರೇಶ ಬಂಗಾರಶೆಟ್ಟರ, ಹ.ಯ.ಈಟಿಯವರ, ಪರಸಪ್ಪ ಪಂಚಮ, ತಾಜುದ್ದೀನ ದಳಪತಿ, ಪ್ರಕಾಶ ಬೆದವಟ್ಟಿ, ರವೀಂದ್ರ ಬಾಕಳೆ, ಪ್ರಮೋದ ಬಡಿಗೇರ, ಶರಣಪ್ಪ ಗೋನಾಳ, ದಾಸಪ್ಪ, ಹನುಮಂತ, ಶಿವರಾಜ, ಅಮರೇಶ ಅರಳೆಲೆಮಠ, ಯಮನೂರ ಸಂಗಟಿ, ಬಸವರಾಜ ಹೂಗಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.