ADVERTISEMENT

‘ಭಾಗ್ಯ’ಗಳಿಂದಲೇ ಕಾಂಗ್ರೆಸ್‌ಗೆ ಗೆಲವು

ಕಾಂಗ್ರೆಸ್‌ ಅಭ್ಯರ್ಥಿ ಬಯ್ಯಾಪೂರ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 12:23 IST
Last Updated 26 ಏಪ್ರಿಲ್ 2018, 12:23 IST

ಹನುಮಸಾಗರ: ಬಡವರು, ರೈತರು, ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ‘ಭಾಗ್ಯ’ಗಳ ಹೆಸರಿನಲ್ಲಿ ಜಾರಿಗೆ ತಂದ ಸರ್ಕಾರ ಗೆಲುವಿಗೆ ಕಾರಣವಾಗಲಿವೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಕ್ಷೇತ್ರದ ವಿವಿಧ ಭಾಗಗಳಲ್ಲಿ ವಿವಿಧ ಸಮುದಾಯಗಳ ಮುಖಂಡರು, ಯುವಕರು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್‌ ಮತ್ತೆ ಚುಕ್ಕಾಣಿ ಹಿಡಿಯುವಲ್ಲಿ ಸಂದೇಹವಿಲ್ಲ’ ಎಂದು ಹೇಳಿದರು.

‘ಬಡವರು, ದಲಿತರು ಹಾಗೂ ಹಿಂದುಳಿದವ ವರ್ಗಗಳಿಗೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಇವು ಚುನಾವಣೆಯಲ್ಲಿ ಕೈಹಿಡಯಲಿವೆ’ ಎಂದು ಅವರು ತಿಳಿಸಿದರು.

ADVERTISEMENT

ಪ್ರಮುಖರಾದ ಮಹಾಮತೇಶ ಅಗಸಿಮುಂದಿನ, ಸೂಚಪ್ಪ ಭೋವಿ, ದುರುಗೇಶ ಮಡಿವಾಳರ, ಚಂದ್ರು ಹಿರೇಮನಿ, ಭವಾನಿಸಾ ಪಾಟೀಲ, ಮಂಜುನಾಥ ಹುಲ್ಲೂರ, ಯಮನೂರ ಮಡಿವಾಳರ, ಚಂದ್ರು ಹಲಕೋಲಿ ಇದ್ದರು. ದಾದೇಸಾಬ ಮೂಲಿಮನಿ, ಅಹ್ಮದ್‌ಸಾಬ ಚೌದರಿ, ಲಾಲಸಾಬ ಬಾಗವಾನ, ಹಸನಸಾಬ ಇಲಕಲ್‌, ನಬಿಸಾಬ ಕಟಗಿ, ಲಕ್ಷ್ಮಣ ಸಿನ್ನೂರ, ಖಾದರಭಾಷಾ ಅತ್ತಾರ ಕಾಂಗ್ರೆಸ್ ಪಕ್ಷ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.