ADVERTISEMENT

ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 7:55 IST
Last Updated 5 ಜುಲೈ 2012, 7:55 IST

ಮಸ್ಕಿ: ಮತದಾರರ ಪಟ್ಟಿಯಲ್ಲಿ ಮತದಾರರ ಭಾವಚಿತ್ರ ಕಡ್ಡಾಯವಾಗಿ ಇರದಿದ್ದರೆ ಅಂತವರನ್ನು ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಲಿಂಗಸೂಗೂರು ಉಪ ವಿಭಾಗಾಧಿಕಾರಿ ಟಿ. ಯೋಗೇಶ ತಿಳಿಸಿದರು.

ಭಾನುವಾರ ಧನಗಾರವಾಡಿ ಶಾಲೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಸ್ಕರಣ ಕಾರ್ಯ ಪರಿಶೀಲಿಸಿದ ನಂತರ ಅವರು  ಮಾತನಾಡುತ್ತಿದ್ದರು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಮತದಾರನ ಭಾವ ಚಿತ್ರ ಇರದಿದ್ದ ಪಕ್ಷದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪಟ್ಟಿಯಿಂದ ಅವರ ಹೆಸರು ತೆಗೆದು ಹಾಕಲಾಗುವುದರಿಂದ ಮತದಾನದ ಹಕ್ಕು ಇರುವುದಿಲ್ಲ ಎಂದರು.

ಮತದಾರರು ತಮ್ಮ ತಮ್ಮ ಮತಗಟ್ಟೆಯ ಕೇಂದ್ರಕ್ಕೆ ಹೋಗಿ ಕಡ್ಡಾಯವಾಗಿ ಭಾವ ಚಿತ್ರ ತೆಗೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ಬಿ. ಮುರಾರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹನುಮಂತಪ್ಪ ಮೋಚಿ, ಸದಸ್ಯರಾದ ಶಬ್ಬೀರ್, ಬಸವರಾಜ ನಾಯಿಕೋಡಿ, ರವಿಕುಮಾರ ಪಾಟೀಲ, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಆಷಾಢ ಏಕಾದಶಿ ಅಂಗವಾಗಿ ಭಜನೆ: ಆಷಾಢ ಏಕಾದಶಿ ಅಂಗವಾಗಿ ಕಲ್ಲುಭಾವಿಕಟ್ಟೆ ಮಾರುತಿ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಭಜನೆ ಸೇರಿದಂತೆ ಇತರೆ ಕಾರ್ಯಕ್ರಮಗಳು ನಡೆದವು.ಭಾನುವಾರ ಬೆಳಿಗ್ಗೆ ಪ್ರಮುಖ ಬೀದಿಗಳಲ್ಲಿ ಮಾರುತಿ ಭಾವಚಿತ್ರದ ಮೆರವಣಿಗೆ ನಡೆಯಿತು.

ನಂತರ ಮಾರುತಿ ದೇವಸ್ಥಾನದಲ್ಲಿ ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ನಡೆಯಿತು. ಮಲ್ಲಪ್ಪ ಧನಶೆಟ್ಟಿ, ಅಮರೇಶ ಪತ್ತಾರ, ತಿಪ್ಪಣ್ಣ ಮಡಿವಾಳ, ಪಂಪಣ್ಣ ಹಡಪದ, ಬಸವರಾಜ ಚಿಕ್ಕಕಡಬೂರು,ರಮೇಶ ಉಪ್ಪಾರ, ನಾಗರಾಜ ಧನಶೆಟ್ಟಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.