ADVERTISEMENT

ಮಹಾಮಾಯಾ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:35 IST
Last Updated 8 ಅಕ್ಟೋಬರ್ 2011, 10:35 IST

ಕುಕನೂರು: ಇಲ್ಲಿಯ ಸುಪ್ರಸಿದ್ಧ, ಐತಿಹಾಸಿಕ ಹಾಗೂ ಜಾಗೃತ ಕ್ಷೇತ್ರವೆಂದು ಪ್ರಖ್ಯಾತಿ ಪಡೆದ ಮಹಾಮಾಯಾ ದೇವಿಯ ಮಹಾರಥೋತ್ಸವ ಪವಿತ್ರ ಮಹಾನವಮಿ ಆಯುಧ ಪೂಜಾ ದಿನದಂದು ವಿಜೃಂಭಣೆಯಿಂದ ನೆರವೇರಿತು.

ಶರನ್ನವರಾತ್ರಿಯ ನಿಮಿತ್ತ ಕಳೆದ ಒಂಭತ್ತು ದಿನಗಳಿಂದ ದೇವಿಗೆ ವಿಶೇಷ ಪೂಜೆ ಪುನಸ್ಕಾರ ಸಾಂಗೋಪಸಾಂಗವಾಗಿ ನೆರವೇರಿದವು. ಕುಕನೂರು ದ್ಯಾಮವ್ವ ಎಂದೇ ಪ್ರಖ್ಯಾತಿ ಪಡೆದ ಮಹಾಮಾಯೆ, ಜೇಷ್ಠಾದೇವಿ ಹೀಗೆ ಹತ್ತು ಹಲವಾರು ನಾಮಾಂಕಿತಗಳಿಂದ ಕರೆಯಿಸಿಕೊಳ್ಳುವ ದೇವಿಯ ಭಕ್ತರು ಕೊಪ್ಫಳ ಸೇರಿದಂತೆ ಉತ್ತರ ಕರ್ನಾಟಕದ  ಜಿಲ್ಲೆಗಳಿಂದ ಸಾವಿರಾರು ಭಕ್ತರು ಒಂದು ದಿನ ಮುಂಚಿತವಾಗಿ ಆಗಮಿಸಿ ದೇವಿಯ ಆಶೀರ್ವಾದ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.