ADVERTISEMENT

ಶಸ್ತ್ರಚಿಕಿತ್ಸೆಗೆ ಹಣದ ಕೊರತೆ: ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 11:18 IST
Last Updated 18 ಜೂನ್ 2013, 11:18 IST
ಕಾರಟಗಿ ಸಮೀಪದ ಹೊಸ ಜೂರಟಗಿಯಲ್ಲಿ ಕಣ್ಣಿನ ತೊಂದರೆಯಿಂದ ವಿಶ್ರಾಂತಿ ಪಡೆಯುತ್ತಿರುವ ಸೋಮನಾಥನ ಆರೈಕೆಯಲ್ಲಿರುವ ತಾಯಿ ಲಕ್ಷೀ ತಳವಾರ
ಕಾರಟಗಿ ಸಮೀಪದ ಹೊಸ ಜೂರಟಗಿಯಲ್ಲಿ ಕಣ್ಣಿನ ತೊಂದರೆಯಿಂದ ವಿಶ್ರಾಂತಿ ಪಡೆಯುತ್ತಿರುವ ಸೋಮನಾಥನ ಆರೈಕೆಯಲ್ಲಿರುವ ತಾಯಿ ಲಕ್ಷೀ ತಳವಾರ   

ಕಾರಟಗಿ: ಸಕಾಲಕ್ಕೆ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡಿಸಬೇಕು. ಇಲ್ಲದಿದ್ದರೆ ಈಗ ಒಂದು ಕಣ್ಣಿನ ದೃಷ್ಠಿ ಕಳೆದುಕೊಂಡಿರುವ ಬಾಲಕಗೆ ಇನ್ನೊಂದು ಕಣ್ಣು ಹೋಗುವ ಭೀತಿ ಎದುರಾಗಿದೆ. ಕಿತ್ತುತಿನ್ನುವ ಬಡತನ ಒಂದೆಡೆ, ಇನ್ನೊಂದೆಡೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲೇಬೇಕು ಎಂಬುದು ವೈದ್ಯರ ಸೂಚನೆ.  ಉದಾರಿಗಳು ನೆರವು ನೀಡಲು ಮುಂದಾಗಿ ಎಂಬುದು ಕುಟುಂಬದವರ ಮನವಿ.

ಸಮೀಪದ ಹೊಸ ಜೂರಟಗಿ ಗ್ರಾಮದ ಲಕ್ಷ್ಮೀ ರಾಮಣ್ಣ ತಳವಾರ ಕುಟುಂಬದ ಪರಿಸ್ಥಿತಿ ಇದು. 6ನೇ ತರಗತಿ ಓದಬೇಕಿದ್ದ ಬಾಲಕ ಸೋಮನಾಥಗೆ ಶಾಲೆಗೆ ಹೋಗುವ ತವಕ. ಆದರೆ ದೃಷ್ಠಿಯ ದೋಷ ಆತನನ್ನು ಮನೆಯಲ್ಲಿರಿಸಿದೆ. ಪಾಲಕರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂಬ ತವಕ. ಆದರೆ ಕಿತ್ತುತಿನ್ನುವ ಬಡತನ ಅವರಿಗೆ ಅಡ್ಡಿಯಾಗಿದೆ. ಸೋಮನಾಥ ಮತ್ತೆ ಮೊದಲಿನಂತಾಗಲು, ಈಗ ಕಣ್ಣಲ್ಲಿಯ ಕೀವು ಸಂಗ್ರಹಣೆಯಿಂದ ನಲುಗುತ್ತಿರುವುದರಿಂದ ಮುಕ್ತಿ ಪಡೆಯಲು ಉದಾರಿಗಳು ಸಹಾಯಕ್ಕೆ ಮುಂದಾಗಿ ಮಾನವೀಯತೆ ಮೆರೆಯಬೇಕಿದೆ.

ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಾಗ ಶಿವರಾಜ್ ತಂಗಡಗಿ ಬೆಂಬಲಿಗರು ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ರಸ್ತೆಗುಂಟ ಆಕಳೊಂದಿಗೆ ಸೋಮನಾಥನು ತಂದೆ ರಾಮಣ್ಣನೊಂದಿಗೆ ಹೊರಟಿದ್ದರು. ಭಾರಿ ಶಬ್ಧಕ್ಕೆ ಬೆದರಿದ ಆಕಳು, ಬಾಲಕ ಸೋಮನಾಥನ ಕಣ್ಣಿಗೆ ಕಿವಿಯಿತು. ಘಟನೆಯಲ್ಲಿ ದೃಷ್ಠಿ ಇಲ್ಲದಾಗಿದೆ. ಒಂದು ಕಣ್ಣಿಗೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಇನ್ನೊಂದು ಕಣ್ಣಿಗೂ ತೊಂದರೆಯಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಸಚಿವ ತಂಗಡಗಿ ಹಾಗೂ ಇತರರು ನಮ್ಮ ಮಗನಿಗೆ ದೃಷ್ಠಿ ಬರಲು ಸಹಾಯ ಮಾಡಿ ಎಂದು ಕುಟುಂಬ ಸದಸ್ಯರು ಕೋರಿದ್ದಾರೆ.

ನೆರವು ನೀಡುವ ಉದಾರಿಗಳು ರಾಮಣ್ಣ ತಳವಾರ, ಸಾಕೀನ್ ಹೊಸ ಜೂರಟಗಿ, ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕು ಮೊಬೈಲ್ 9481940381ಗೆ ಸಂಪರ್ಕಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.