ಕುಕನೂರು: ಸಮೀಪದ ಮಂಡಲಗೇರಿ ಗ್ರಾಮದ ಶರಣಪ್ಪ ಮಾದಿನೂರು ಅವರ ಹೊಲದಲ್ಲಿ ಭಾನುವಾರ ಉಳುಮೆ ಮಾಡುವಾಗ ಪುರಾತನ ಶಿಲ್ಪ ಕಲಾಕೃತಿ ಪತ್ತೆಯಾಗಿದೆ. ಶಿಲ್ಪ ಕಲಾಕೃತಿಯು ಚಾಮುಂಡಿ ರೀತಿ ಇದ್ದು, ಹೊಯ್ಸಳರ ಕಾಲದ ಶಿಲ್ಪ ಕಲಾಕೃತಿಯಾಗಿರಬಹುದು ಎನ್ನಲಾಗಿದೆ
ಇಂದು ಯಡಿಯಾಪುರ ಸಿದ್ಧಲಿಂಗೇಶ್ವರ ರಥೋತ್ಸವ
ಕುಕನೂರು: ಸಮೀಪದ ಯಡಿಯಾಪೂರ ಗ್ರಾಮದ ಸಿದ್ಧಲಿಂಗೇಶ್ವರ ರಥೋತ್ಸವ ಮಂಗಳವಾರ ಜರುಗಲಿದೆ. ಬೆಳಿಗ್ಗೆ ಸಿದ್ಧಲಿಂಗೇಶ್ವರ ಮೂರ್ತಿಗೆ ಬೆದವಟ್ಟಿ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಹಾರುದ್ರಾಭಿಷೇಕ ನೆರವೇರಿಸುವರು. ಸಂಜೆ 4 ಕ್ಕೆ ಸಿದ್ಧಲಿಂಗೇಶ್ವರ ಪಂಚಕಳಸ ರಥೋತ್ಸವ ಸಕಲ ವಾಧ್ಯ ಮೇಳದೊಂದಿಗೆ ಜರುಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.