ಗಂಗಾವತಿ: ತಾಲ್ಲೂಕಿನ ಡಣಾಪೂರ ಗ್ರಾಮದಲ್ಲಿ ಶನಿವಾರ ಅಪಾರ ಭಕ್ತರ ಸಮ್ಮುಖದಲ್ಲಿ 57ನೇ ವರ್ಷದ ಕಲಬುರಗಿಯ ಶರಣಬಸವೇಶ್ವರ ಮಹಾರಥೊತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಶರಣರಿಗೆ ಮಹಾರುದ್ರಾಭಿಷೇಕ ನಡೆಸಿ ಸುಮಂಗಲೆಯರು ಕಳಸ, ಕುಂಭಗಳೊಂದಿಗೆ ಗಂಗೆ ಸ್ಥಳಕ್ಕೆ ತೆರಳಿ ವಿಶೇಷ ಪೂಜೆ ನಡೆಸಿ, ಅಲ್ಲಿಂದ ಗಂಗೆಯನ್ನು ತಂದು ಶರಣರಿಗೆ ಅಭಿಷೇಕ ಮಾಡಿದರು.
ನಂತರ ಭಕ್ತರ ಸಮ್ಮುಖದಲ್ಲಿ ಸಾಮೂಹಿಕ ವಿವಾಹಗಳು ನೆರವೇರಿದವು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ಶರಣಬಸವೇಶ್ವರ ರಥೋತ್ಸವ ಗ್ರಾಮದ ರಾಜ ಬೀದಿಯಲ್ಲಿ ಸಂಭ್ರಮದಿಂದ ನಡೆಯಿತು.
ಭಕ್ತರು ರಥಕ್ಕೆ ಉತ್ತತ್ತಿ ಎಸೆದು, ಭಕ್ತಯಿಂದ ಹರಕೆ ಹೊತ್ತರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಸುಳೆಕಲ್ ಪದ್ಮಯ್ಯ ತಾತ, ತಿರುಪತೇಪ್ಪ ತಾತ, ಗೌವಿಸಿದ್ದಯ್ಯ, ಶರಣಬಸಪ್ಪಯ್ಯ ತಾತ, ಪುರಾಣ ಪ್ರವಚಕ ಶಂಭುಲಿಂಗ ಶಾಸ್ತ್ರಿ, ಗ್ರಾಮಸ್ಥರಾದ ಮಲ್ಲನಗೌಡ, ಪಕೀರಪ್ಪ ,ಗುಂಡಯ್ಯ ಸ್ವಾಮಿ ಸೇರಿದಂತೆ ಶರಣಬಸವೇಶ್ವರ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.