ADVERTISEMENT

ಕೊಪ್ಪಳ: ‘ಈ ಸಲ ಕಪ್‌ ನಮ್ದೇ’ ಹೆಸರಲ್ಲಿ ಹುಲಿಗೆಮ್ಮ ದೇವಿಗೆ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:17 IST
Last Updated 2 ಜೂನ್ 2025, 15:17 IST
ಹುಲಿಗಿಯಲ್ಲಿ ಅಭಿಮಾನಿಗಳು ಪಡೆದಿರುವ ಪಂಚಾಮೃತ ಅಭಿಷೇಕದ ರಸೀತಿ
ಹುಲಿಗಿಯಲ್ಲಿ ಅಭಿಮಾನಿಗಳು ಪಡೆದಿರುವ ಪಂಚಾಮೃತ ಅಭಿಷೇಕದ ರಸೀತಿ   

ಕೊಪ್ಪಳ: ಐಪಿಎಲ್‌ 18ನೇ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವೇ  ಚಾಂಪಿಯನ್‌ ಆಗಬೇಕು ಎನ್ನುವ ಪ್ರಾರ್ಥನೆಯೊಂದಿಗೆ ಆ ತಂಡದ ಅಭಿಮಾನಿಗಳು ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿಗೆ ಸೋಮವಾರ ಪಂಚಾಮೃತ ಅಭಿಷೇಕದ ಸೇವೆ ಸಲ್ಲಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಕ್ಕೆ ಬಂದ ಮೂವರು ಯುವಕರು ಸೇವೆಯ ಹೆಸರಿನಲ್ಲಿ ಪಂಚಾಮೃತ ಅಭಿಷೇಕವೆಂದು, ಹೆಸರಿನಲ್ಲಿ ’ಈ ಸಲ ಕಪ್‌ ನಮ್ದೇ’ ಎಂದು ಬರೆಸಿ ರಸೀದಿ ಪಡೆದು ದೇವಸ್ಥಾನದ ಮುಂದೆ ನಿಂತು ಫೋಟೊ ತೆಗೆಯಿಸಿಕೊಂಡಿದ್ದಾರೆ. ಇದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಪಂದ್ಯ ವೀಕ್ಷಣೆಗೆ ವ್ಯವಸ್ಥೆ: ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್‌ ನಡುವೆ ಮಂಗಳವಾರ ನಡೆಯಲಿರುವ ಫೈನಲ್‌ ಪಂದ್ಯವನ್ನು ದೊಡ್ಡ ಪರದೆಯಲ್ಲಿ ತೋರಿಸಲು ಇಲ್ಲಿನ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ತಾಲ್ಲೂಕು ಕ್ರೀಡಾಂಗಣದಲ್ಲಿ  ವ್ಯವಸ್ಥೆ ಮಾಡಿದೆ.

ADVERTISEMENT

‘ಆರ್‌ಸಿಬಿ ತಂಡ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಿದ್ದು, ಪಂದ್ಯ ನೋಡಲು ಬರುವ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಉಪಹಾರ ನೀಡಲಾಗುತ್ತದೆ. ಆರ್‌ಸಿಬಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷರೂ ಆದ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.