ADVERTISEMENT

‘ಆಯ್ಕೆಯಾದ ಮಕ್ಕಳ ಪಟ್ಟಿ ಕೈಬಿಡಬೇಡಿ’

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 12:21 IST
Last Updated 7 ಸೆಪ್ಟೆಂಬರ್ 2020, 12:21 IST
ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಗೆ ಆಯ್ಕೆಯಾದ ಮಕ್ಕಳ ಪಟ್ಟಿಯನ್ನು ಕೈಬಿಡದಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೋಮವಾರ ಕ್ಷೇತ್ರಶಿಕ್ಷಣಾಧಿಕಾರಿ ಸೋಮಶೇಖರಗೌಡ ಅವರಿಗೆ ಮನವಿಯನ್ನು ಸಲ್ಲಿಸಿತು
ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಗೆ ಆಯ್ಕೆಯಾದ ಮಕ್ಕಳ ಪಟ್ಟಿಯನ್ನು ಕೈಬಿಡದಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೋಮವಾರ ಕ್ಷೇತ್ರಶಿಕ್ಷಣಾಧಿಕಾರಿ ಸೋಮಶೇಖರಗೌಡ ಅವರಿಗೆ ಮನವಿಯನ್ನು ಸಲ್ಲಿಸಿತು   

ಗಂಗಾವತಿ: ಕನಕಗಿರಿಯ ಕರ್ನಾಟಕ ಪಬ್ಲಿಕ್‌ ಶಾಲೆಗೆ ಆಯ್ಕೆಯಾದ ಮಕ್ಕಳ ಪಟ್ಟಿಯನ್ನು ಕೈಬಿಡದಂತೆ ಒತ್ತಾಯಿಸಿ ಸೋಮವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಅವರಿಗೆ ಮನವಿ ಸಲ್ಲಿಸಿತು.

ಈ ವೇಳೆ ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಸರ್ವಜ್ಞಮೂರ್ತಿ ಮಾತನಾಡಿ,‘ಕನಕಗಿರಿಯ ಕೆಪಿಎಸ್‌ ಶಾಲೆಯ ಎಲ್‌.ಕೆ.ಜಿ ವಿಭಾಗಕ್ಕೆ 143 ಅರ್ಜಿಗಳಲ್ಲಿ ಒಂದು ಅರ್ಜಿಯ ಹೆಸರು ಎರಡು ಬಾರಿ ಉಲ್ಲೇಖಿಸಿರುವುದು ಲಾಟರಿ ಚೀಟಿ ಎತ್ತುವಾಗ ಬಯಲಾಗಿದೆ. ಈಗಾಗಲೇ ಪಾರದರ್ಶಕವಾಗಿ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಮಾರ್ಗಸೂಚನೆಯಂತೆ 25 ಮಕ್ಕಳು ಆಯ್ಕೆಯಾಗಿದ್ದಾರೆ. ಇನ್ನುಳಿದ ಐದು ಮಕ್ಕಳ ಖಾಲಿ ಸ್ಥಾನಕ್ಕೆ ಮಾತ್ರ ಲಾಟರಿ ಮೂಲಕ ಭರ್ತಿ ಮಾಡಿಕೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಆದರೆ ಕೆಲ ಪಾಲಕರು ಮತ್ತೊಮ್ಮೆ ಹೊಸದಾಗಿ ಲಾಟರಿ ಪ್ರಕ್ರಿಯೆ ನಡೆಸುವಂತೆ ಪಟ್ಟುಹಿಡಿದಿರುವುದು ಸರಿಯಲ್ಲ. ಇದರಿಂದ ಆಯ್ಕೆಯಾದ 25 ಮಕ್ಕಳ ಪಾಲಕರಿಗೆ ನಿರಾಶೆಯಾಗಲಿದೆ. ಆದ್ದರಿಂದ ಈಗಾಗಲೇ ಆಯ್ಕೆಯಾದ 25 ಮಕ್ಕಳ ಪಟ್ಟಿಯನ್ನು ಬಿಟ್ಟು ಉಳಿದ ಐದು ಸ್ಥಾನಗಳಿಗೆ ಮಾತ್ರ ಆಯ್ಕೆ ಮಾಡಬೇಕು. ಜೊತೆಗೆ ಕರ್ತವ್ಯಲೋಪ ಎಸಗಿದ ಮುಖ್ಯೋಪಾಧ್ಯಯರನ್ನು, ಶಿಕ್ಷಕರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಈ ವೇಳೆ ಸಂಘಟನೆಯ ಕಾರ್ಯಕರ್ತರಾದ ಲಕ್ಷ್ಮೀ ಭೋಸ್ಲೆ, ವಿಜಯಕುಮಾರ್‌, ಶಿವಕುಮಾರ್‌ ಹಾಲಸಮುದ್ರ, ಪಾಲಕರಾದ ಅಯ್ಯನಗೌಡ, ಹನುಮೇಶ್‌ ಯಾದವ್‌ ಹಾಗೂ ರಘುಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.