ADVERTISEMENT

₹ 2 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ದಾಳಿ: ಅಧಿಕಾರಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 14:37 IST
Last Updated 30 ಏಪ್ರಿಲ್ 2019, 14:37 IST
ಡಾ.ಎಂ.ಎಂ.ಕಟ್ಟಿಮನಿ
ಡಾ.ಎಂ.ಎಂ.ಕಟ್ಟಿಮನಿ   

ಕೊಪ್ಪಳ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿ ಡಾ.ಎಂ.ಎಂ.ಕಟ್ಟಿಮನಿ ₹ 2 ಸಾವಿರ ಲಂಚ ಪಡೆಯುವವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕೂಕನಪಳ್ಳಿಯ ಬಸಪ್ಪ ಗುಳದಳ್ಳಿ ಎಂಬುವರು ಕ್ಯಾಟರಿಂಗ್ ವ್ಯಾಪಾರಕ್ಕಾಗಿ ಪರವಾನಗಿ ಬಯಸಿ ಅರ್ಜಿ ಸಲ್ಲಿಸಿದ್ದರು. ಆದರೆ ಕಟ್ಟಿಮನಿ ಅವರು ಕೆಲಸ ಮಾಡಿಕೊಡಲು ₹ 2 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಬಸಪ್ಪ ಅವರು ಹಣ ನೀಡುವ ಮುಂದೆ ದಾಳಿ ನಡೆಸಿದ ಎಸಿಬಿ ಅಧಿಕಾರಿ ರುದ್ರೇಶ ಉಜ್ಜನಕೊಪ್ಪ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ADVERTISEMENT

ಈ ಕುರಿತು ಎಸಿಬಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.