ಯಲಬುರ್ಗಾ: ವಕೀಲರ ಸಂರಕ್ಷಣಾ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸುವುದು, ಪೊಲೀಸರ ಏಕಪಕ್ಷೀಯ ವರ್ತನೆಯಿಂದ ವಕೀಲರಿಗೆ ರಕ್ಷಣೆ ಒದಗಿಸುವುದು, ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆಯನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಕೀಲರು ಆಗ್ರಹಿಸಿದರು.
ಅಖಿಲ ಭಾರತ ವಕೀಲರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ಹಾಗೂ ಸಹಿ ಸಂಗ್ರಹವನ್ನು ತಹಶೀಲ್ದಾರ್ ಮುಖ್ಯಾಂತರ ಪ್ರಧಾನಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಿರಿಯ ವಕೀಲರಿಗೆ ಮಾಸಿಕ ₹10 ಸಾವಿರ ಸಹಾಯಧನ ನೀಡುವುದು, ತಾಲ್ಲೂಕು ಮತ್ತು ಜಿಲ್ಲೆಯ ವಕೀಲರ ಸಂಘಕ್ಕೆ ಕ್ರಮವಾಗಿ ₹5 ಲಕ್ಷ ಮತ್ತು ₹10 ಲಕ್ಷ ಅನುದಾನ ನೀಡುವುದು, ಕಡ್ಡಾಯವಾಗಿ ವಕೀಲರಿಗೆ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ಸಮಿತಿಯ ಉಪಾಧ್ಯಕ್ಷ ಆರ್.ಕೆ. ದೇಸಾಯಿ, ಹಿರಿಯ ವಕೀಲರಾದ ಸಿ.ಪಿ. ಪಾಟೀಲ, ರಾಜ್ಯ ಸಮಿತಿ ಸದಸ್ಯರಾದ ವಿಜಯಲಕ್ಷ್ಮಿ ನವಲಗುಂದ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಹೊಂಬಳ, ಕಾರ್ಯದರ್ಶಿ ಮಹಾಂತೇಶ, ಎಚ್.ಎಚ್. ಹಿರೇಮನಿ, ಎ.ಎಂ. ಪಾಟೀಲ, ಯು.ಎ. ಲಾಲಗೊಂಡರ, ಎಸ್.ಎಸ್. ಮಾದಿನೂರ, ಉಮಾ ಕಲ್ಲೂರ, ಪ್ರಭುರಾಜ ಕಲಬುರ್ಗಿ, ಪಿ.ಆರ್. ಹಿರೇಮಠ, ಶಾರದಾ ಇಟಗಿ, ಜಗೀಧ ತೊಂಡಿಹಾಳ, ಇಂದಿರಾ, ಶ್ವೇತಾ, ಜ್ಯೋತಿ, ಸಿ.ಆರ್. ಕೆಂಚಮ್ಮನವರ, ವಿ.ಎಸ್. ಕಡಬಲಕಟ್ಟಿ, ಜಗದೀಶ ಹೂಗಾರ, ಬಸವರಾಜ ತುರಕಾಣಿ, ಸುರೇಶ ಹಡಪದ, ದಾದು ಎಲಿಗಾರ, ಸಿದ್ಧು ಮಾದರ, ಪ್ರವೀಣ ಮಲಗಾ, ಅಂಬರೀಷ ಹುಬ್ಬಳ್ಳಿ, ಸಿದ್ದಪ್ಪ, ಶಿವಾರಾಜ ಬಣಗಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.