ADVERTISEMENT

ಅಳವಂಡಿ | ನಿರ್ಮಾಣವಾಗದ ಸೇತುವೆ: ಗ್ರಾಮಸ್ಥರ ಪರದಾಟ

ಅಳವಂಡಿ-ನಿಲೋಗಿಪುರ ರಸ್ತೆ ಮಧ್ಯೆ ಇರುವ ಹಿರೇಹಳ್ಳಕ್ಕೆ ಶೀಘ್ರದಲ್ಲೇ ಸೇತುವೆ ನಿರ್ಮಾಣ ಮಾಡುವ ಕಾರ್ಯ ಮಾಡಲಾಗುವುದುರಾಘವೇಂದ್ರ ಹಿಟ್ನಾಳ, ಶಾಸಕ ಕೊಪ್ಪಳ

ಜುನಸಾಬ ವಡ್ಡಟ್ಟಿ
Published 19 ಜುಲೈ 2025, 6:32 IST
Last Updated 19 ಜುಲೈ 2025, 6:32 IST

ಅಳವಂಡಿಯಿಂದ ನಿಲೋಗಿಪುರ ರಸ್ತೆ ಮಧ್ಯೆಯಿರುವ ಹಿರೇಹಳ್ಳದ ನೀರಿನ ರಭಸದಲ್ಲಿ ಹಿರೇಹಳ್ಳ ದಾಟುತ್ತಿರುವ ಆಟೊ

ಅಳವಂಡಿಯಿಂದ ನಿಲೋಗಿಪುರ ರಸ್ತೆ ಮಧ್ಯೆಯಿರುವ ಹಿರೇಹಳ್ಳದ ನೀರಿನ ರಭಸದಲ್ಲಿ ಹಿರೇಹಳ್ಳ ದಾಟುತ್ತಿರುವ ಆಟೊ

ಅಳವಂಡಿ: ಹಿರೇಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎಂದು ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಲವು ವರ್ಷಗಳವರೆಗೆ ಬೇಡಿಕೆ ಇಡುತ್ತ ಬಂದರೂ ಸೇತುವೆಯ ಕನಸು ಕನಸಾಗಿಯೇ ಉಳಿದಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಸೇತು ನಿರ್ಮಾಣಕ್ಕೆ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಅಳವಂಡಿ ಸಮೀಪದ ನಿಲೋಗಿಪುರ, ಹಲವಾಗಲಿ ಹಾಗೂ ಕೇಸಲಾಪುರ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಈ ಗ್ರಾಮಗಳ ನಿವಾಸಿಗಳು, ಆಸ್ಪತ್ರೆ, ವ್ಯಾಪಾರ ವಹಿವಾಟಿಗೆ ಅಳವಂಡಿ ಗ್ರಾಮಕ್ಕೆ ತೆರಳಲು ನಿಲೋಗಿಪುರ-ಅಳವಂಡಿ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ರಸ್ತೆ ಮಧ್ಯೆ ಇರುವ ಹಿರೇಹಳ್ಳ ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿದೆ. ಹಿರೇಹಳ್ಳಕ್ಕೆ ನೆಲಮಟ್ಟದ ಸೇತುವೆಯಿದೆ. ಆದರೆ ಸೇತುವೆ ಕಲ್ಲುಗಳು ಕಿತ್ತು ಹೋಗಿವೆ. ಇದರಿಂದ ಗುಂಡಿಗಳು ನಿರ್ಮಾಣವಾಗಿದ್ದು, ನಿತ್ಯ ವಾಹನ ಸವಾರರು ಪರದಾಡುವಂತಾಗಿದೆ.

ಹಿರೇಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಸ್ವತಃ ಹಣ ಖರ್ಚು ಮಾಡಿ, ನೆಲಮಟ್ಟದ ಸೇತುವೆಗೆ ಮಣ್ಣು, ಕಲ್ಲು ಹಾಕಿ ತಾತ್ಕಾಲಿಕವಾಗಿ ಸಂಚರಿಸಲು ನಿರ್ಮಾಣ ಮಾಡಿದ್ದರು. ಆದರೆ ಇದೀಗ ಮತ್ತೆ ಮಳೆಯಿಂದ ಸಂಪೂರ್ಣ ನೆಲಮಟ್ಟದ ಕಲ್ಲುಗಳು ಕಿತ್ತು ಹಾಳಾಗಿದೆ. ಮಳೆಗಾಲದಲ್ಲಿ ಹಿರೇಹಳ್ಳದ ತೊಂದರೆ‌ ಆಗುವುದರಿಂದ ಹಟ್ಟಿ ಮಾರ್ಗವಾಗಿ ಸುತ್ತು ಬಳಸಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಅಳವಂಡಿಗೆ ಹೋಗಬೇಕಾದರೆ ಹಿರೇಹಳ್ಳದ ಮೂಲಕ ಹಾದು ಹೋಗಿರುವ ರಸ್ತೆ ಮೂಲಕ ತೆರಳುತ್ತಾರೆ. ಸೇತುವೆ ಕಿತ್ತು ಹೋಗಿದ್ದರಿಂದ ವಾಹನ ಸವಾರರ ಬಿದ್ದು ಗಾಯಗೊಂಡಿರುವ ಹಾಗೂ ಕೆಕೆಆರ್‌ಟಿಸಿ ಬಸ್‌ವೊಂದು ಸೇತುವೆ ಮೇಲೆ ಸಿಕ್ಕಿಹಾಕಿಕೊಂಡಿರುವ ಉದಾಹರಣೆಗಳಿವೆ. ಮಳೆಗಾಲದ ಸಂದರ್ಭದಲ್ಲಿ ಹಿರೇಹಳ್ಳ ದಾಟುವುದೇ ದೊಡ್ಡ ಸವಾಲಾಗಿದೆ. ಹಲವು ವರ್ಷ ಗಳಿಂದ ಹಿರೇಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂಬ ಮನವಿಗೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ನಿರ್ಲಕ್ಷ್ಯ: ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಹಲವಾರು ಬಾರಿ ಹಿರೇಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂದು ಮನವಿ ಸಲ್ಲಿಸಿದ್ದೇವೆ. ಆದರೆ ಶಾಸಕರು ಈವರೆಗೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳದಿದ್ದರೆ ಗ್ರಾಮಸ್ಥರು ಸೇರಿ ಬೃಹತ್‌ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.