
ಪ್ರಜಾವಾಣಿ ವಾರ್ತೆ
ಅಳವಂಡಿ: ಸಿದ್ಧೇಶ್ವರ ಜಾತ್ರೆಗೆ ಊರಿನಲ್ಲಿ ಒಂದೆಡೆ ಸಂಭ್ರಮ ಮನೆ ಮಾಡಿದ್ದರೆ, ಜಾತ್ರೆ ಆವರಣದಲ್ಲಿ ತರಹೇವಾರಿ ಊಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶುಕ್ರವಾರ ಹಾಗೂ ಶನಿವಾರ ನಡೆಯುವ ಕಾರ್ಯಕ್ರಮಗಳಿಗೆ ಬರುವ ಭಕ್ತರಿಗಾಗಿ ಅನ್ನ, ಸಾರು, ಪಲ್ಲೇ, ಶೇಂಗಾ ಹೋಳಿಗೆ, ಜಿಲೇಬಿ ಹೀಗೆ ವಿವಿಧ ತಿನಿಸುಗಳು ತಯಾರಾಗುತ್ತಿವೆ. ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯಲ್ಲಿ ಭಕ್ತರು ಭಕ್ತರಿಗಾಗಿಯೇ ತಯಾರಿಸುವಂತೆ ಇಲ್ಲಿಯೂ ಭಕ್ತರು ಮಿರ್ಚಿ ತಯಾರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮಕ್ಕಳ ಮನರಂಜಿಸಲು ವಿವಿಧ ಆಟಿಕೆ ಸಾಮಗ್ರಿಗಳು, ಬಣ್ಣಬಣ್ಣದ ಬೆಳಕಿನ ಚಿತ್ತಾರದ ಪರಿಕರಗಳು, ಬಲೂನು ಹೀಗೆ ಅನೇಕ ವಸ್ತುಗಳು ಬಂದಿವೆ. ಮಠದ ಆವರಣದಲ್ಲಿ ಗುರುವಾರ ರಾತ್ರಿಯಿಂದಲೇ ಸಂಭ್ರಮ ಮನೆ ಮಾಡಿತ್ತು. ಭಕ್ತರು ತಂಡೋಪತಂಡವಾಗಿ ಬರುವ ಚಿತ್ರಣವೂ ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.