ADVERTISEMENT

‘ತಳಸಮುದಾಯಗಳಿಗೆ ಬೆಳಕು ತಂದವರು’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 7:16 IST
Last Updated 15 ಏಪ್ರಿಲ್ 2021, 7:16 IST
ಕೊಪ್ಪಳದ ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಲಾಯಿತು
ಕೊಪ್ಪಳದ ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಲಾಯಿತು   

ಕೊಪ್ಪಳ:ಭಾರತ ಪ್ರಕಾಶಿಸಲು, ಭವ್ಯಗೊಳ್ಳಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ದೊಡ್ಡದು ಎಂದು ವಾರ್ಡ್ ನಂಬರ್ 29ರ 133ನೇ ಬೂತ್ ಸಮಿತಿಯ ಬಿಜೆಪಿ ಅಧ್ಯಕ್ಷ ಅಮರೇಶ್ ಮುರಲಿ ಹೇಳಿದರು.

ನಗರದ ಹುಡ್ಕೊ ಕಾಲೊನಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ನಮಗೇನು‌ ಕೊಟ್ಟಿದೆ ಎಂದು ಯೋಚಿಸುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿಕೊಂಡರೆ ಜ್ಞಾನ ಸದ್ಬಳಕೆಯಾಗುತ್ತದೆ. ಅಂಬೇಡ್ಕರ್ ಸಹ ಜೀವನದಲ್ಲಿ ನೊಂದು, ಬೆಂದು ಭಾರತೀಯರಿಗೆ ಬೆಳಕಾಗಿ ಭಾರತವನ್ನು ಪ್ರಜ್ವಲಗೊಳಿಸಿದರು. ಅಂಬೇಡ್ಕರ್ ಅವರ ತತ್ವ-ಆದರ್ಶ ಅಳವಡಿಸಿಕೊಂಡರೆ ಬದುಕಿನ ಜೊತೆಗೆ ಭಾರತವೂ ಸದಾ ಹಸಿರಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಮಹಾಲಕ್ಷ್ಮಿ ಕಂದಾರಿ ಮಾತನಾಡಿ, ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನ ಮಾತ್ರವಲ್ಲ, ಸಮಾನತೆ ತಂದು ಕೊಟ್ಟ ಮಹನೀಯರು ಎಂದರು.

ಬಿಜೆಪಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಹೇಮಲತಾ ನಾಯಕ್ ಪ್ರಾಸ್ತಾವಿಕ ಮಾತನಾಡಿ, ಅಂಬೇಡ್ಕರ್ ಅವರು ಬದುಕಿನಲ್ಲಿ ಅವಮಾನಗಳನ್ನು ಎದುರಿಸಿ, ದನಿ ಇಲ್ಲದವರಿಗೆ ದನಿಯಾದವರು. ಅವಮಾನಗಳನ್ನೇ ಸನ್ಮಾನಗಳೆಂದು ಸ್ವೀಕರಿಸಿ ಭಾರತಕ್ಕೆ ಸಂವಿಧಾನ ನೀಡಿದವರು. ಪ್ರತಿಯೊಬ್ಬ ಭಾರತೀಯ ಅಂಬೇಡ್ಕರ್ ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ಕವಿತಾ ಪಾಟೀಲ, ಗೀತಾ ಮುತ್ತಾಳ, ಶಿವಯೋಗಿ ಹಾವಿನಾಳ, ಶ್ರೀಧರ್‌ಗೌಡ ಬನ್ನಿಕೊಪ್ಪ, ಶ್ರೀಧರ್ ಹೀರೇಮಠ, ವೀರಣ್ಣ ಕಲಬುರಗಿ, ದೇವಣ್ಣ ಕಲ್ಲಣ್ಣವರ್, ವಿಠ್ಠಲ್, ಮಾರುತಿ ಕಂದಾರಿ, ಮತ್ತಿತರರು ಇದ್ದರು.

ಸಾಧಕರಿಗೆ ಸನ್ಮಾನ: ವಿಶ್ವ ಜ್ಞಾನ ದಿನಾಚರಣೆ ಅಂಗವಾಗಿ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ತಿರುಮಲೇಶ್ ಕಲ್ಲಣ್ಣವರ್ ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ (ಶೇ 87) ಗಳಿಸಿದ ಆಕಾಶ್ ಮಲ್ಲಪ್ಪ ಬಿಸರಳ್ಳಿ ಅವರನ್ನು ಸನ್ಮಾನಿಸಲಾಯಿತು.

‘ಜಾತ್ಯತೀತ ಭಾರತ ನಿರ್ಮಾಣ’

ಕೊಪ್ಪಳ: ಅಂಬೇಡ್ಕರ್ ಶ್ರೇಷ್ಠ ಆರ್ಥಿಕ ತಜ್ಞ, ಸಂವಿಧಾನ ತಜ್ಞ ಮತ್ತು ರಾಜಕೀಯ ಚಿಂತಕ. ಜಾತ್ಯತೀತ ಭಾರತದ ನಿರ್ಮಾಣ ಅಂಬೇಡ್ಕರ್ ಕನಸಾಗಿತ್ತು. ಅಂಬೇಡ್ಕರ್ ಅವರ ಜೀವನ, ಹೋರಾಟ ಯುವ ಜನಾಂಗಕ್ಕೆ ಸ್ಪೂರ್ತಿ ಆಗಬೇಕು. ಅವರ ಕುರಿತು ಮತ್ತಷ್ಟು ಅಧ್ಯಯನ ಆಗಬೇಕು‌ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹೇಮಲತಾ ನಾಯಕ ಹೇಳಿದರು.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 130ನೇ ಜಯಂತಿಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನ್ಯಾಯ, ಅಸಮಾನತೆ, ಶೋಷಣೆಗಳ ವಿರುದ್ದ ಎಲ್ಲ ಚಳವಳಿಗೆ ಅಂಬೇಡ್ಕರ್ ಚಿಂತನೆಗಳೆ ಸ್ಫೂರ್ತಿ. ನಮ್ಮ ಸರ್ಕಾರ ಅಂಬೇಡ್ಕರ್ ಆಶಯಕ್ಕೆ ಬದ್ಧವಾಗಿದೆ‌. ಅವರ ತತ್ವ ಆದರ್ಶಗಳ ಹಾದಿಯಲ್ಲಿ ನಡೆಯುವ ದೃಢ ಸಂಕಲ್ಪ ತೊಟ್ಟಿದೆ‌ ಎಂದರು.

ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶಪ್ಪ ಹಿರೇಮನಿ ಮಾತನಾಡಿದರು.

ನಗರ ಮಂಡಲ ಅಧ್ಯಕ್ಷ ಸುನೀಲ್ ಹೆಸರೂರ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವಾಣಿಶ್ರೀ ಮಠದ, ಮಹಾಲಕ್ಷ್ಮಿ ಕಂದಾರಿ, ವಿರುಪಾಕ್ಷಯ್ಯ ಗದುಗಿನಮಠ, ಕನಕಮೂರ್ತಿ, ರಮೇಶ ಕವಲೂರ, ಮಹೇಶ ಹಾದಿಮನಿ, ಜಿಲ್ಲಾ ಮಾಧ್ಯಮ ಸಂಚಾಲಕ ಬಿ.ಗಿರೀಶಾನಂದ ಜ್ಞಾನಸುಂದರ ಇದ್ದರು.

ಬಿಜೆಪಿ ಗ್ರಾಮೀಣ ಮಂಡಲ: ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಪ್ರಯುಕ್ತ ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು, ಅಧ್ಯಕ್ಷರಾದ ಪ್ರದೀಪ್ ಹಿಟ್ನಾಳ, ಪಿ.ಬಿ.ಹಿರೇಮಠ, ಶರಣಪ್ಪ ಮತ್ತೂರು,ಎಸ್‌ಸಿಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕನಕಮೂರ್ತಿ ಚೆಲವಾದಿ, ಭೀಮಣ್ಣ ಹಿರೇಮನಿ ಹಾಗೂ ರಮೇಶ್ ಚುಕ್ಕನಕಲ್, ಶಿವಯ್ಯ ಹೀರೆಮಠ್, ಗವಿರಾಜ ಗೊರವರ್, ಅಮಿತ್ ಕಂಪ್ಲೀಕರ್, ಬಸವಲಿಂಗಯ್ಯ ಗದಗಿನಮಠ್, ಅಮೀತ್ ಗುಳದಳ್ಳಿ ಹಾಗೂ ಶೇಖರಪ್ಪ ಘಂಟಿಅವರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.