ADVERTISEMENT

ಕೊಪ್ಪಳ: ಹಳ್ಳದಲ್ಲಿ‌ ಕೊಚ್ಚಿ ಹೋಗಿದ್ದ ಇನ್ನೊಬ್ಬ ಪೊಲೀಸ್ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 8:54 IST
Last Updated 7 ಸೆಪ್ಟೆಂಬರ್ 2022, 8:54 IST
ಪೊಲೀಸ್‌ ಕಾನ್‌ಸ್ಟೆಬಲ್ ಮಹೇಶ ವಕ್ಕರದ (28)
ಪೊಲೀಸ್‌ ಕಾನ್‌ಸ್ಟೆಬಲ್ ಮಹೇಶ ವಕ್ಕರದ (28)   

ಕೊಪ್ಪಳ: ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಬಂದೋಬಸ್ತ್‌ ಕರ್ತವ್ಯ ನಿರ್ವಹಿಸಿ ಮುಂಡರಗಿಗೆ ಹಿಂದಿರುಗುವಾಗ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಹರಿದಿರುವ ತೊಂಡೆಹಳ್ಳದಲ್ಲಿ ಸೋಮವಾರ ರಾತ್ರಿ ಕೊಚ್ಚಿ ಹೋಗಿದ್ದ ಪೊಲೀಸ್‌ ಕಾನ್‌ಸ್ಟೆಬಲ್ ಮಹೇಶ ವಕ್ಕರದ (28) ಶವ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ‌ತಂಡದ ಸದಸ್ಯರು ಕಾರ್ಯಾಚರಣೆಗೆ ಬುಧವಾರ ಕೈ ಜೋಡಿಸಿದರು.

ಮುಂಡರಗಿ ಠಾಣೆ ಕಾನ್‌ಸ್ಟೆಬಲ್ ನಿಂಗಪ್ಪ ಹಲವಾಗಲಿ (28) ಅವರ ಶವ ಮಂಗಳವಾರ ಪತ್ತೆಯಾಗಿತ್ತು. ಇವರಿಬ್ಬರೂ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಊರಿಗೆ ವಾಪಸ್‌ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.