ಅಳವಂಡಿ: ಸಮೀಪದ ಬೈರಾಪುರ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೇವತೆ ದುರ್ಗಾದೇವಿ ಹಾಗೂ ತಾಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ದೇವಿಯ ಮನೆ ಮನೆ ದರ್ಶನ ಹಾಗೂ ಉಡಿ ತುಂಬುವ ಕಾರ್ಯಕ್ರಮ ಸರಳವಾಗಿ ನಡೆಯಿತು.
ಜಾತ್ರ ಮಹೋತ್ಸವದ ಪ್ರಯುಕ್ತವಾಗಿ ದುರ್ಗಾದೇವಿಯ ಕುಂಭವನ್ನು ಹೊತ್ತ ಗ್ರಾಮಸ್ಥರು ಕಳಸ ಹಾಗೂ ಡೊಳ್ಳಿನ ಮೇಳದೊಂದಿಗೆ ಗ್ರಾಮದ ಮನೆ ಮನೆಗೂ ತೆರಳಿ ದೇವಿಯ ದರ್ಶನ ಮಾಡಿಸಿದರು. ನಂತರ ಉಡಿ ತುಂಬುವ ಕಾರ್ಯ ನಡೆಯಿತು.
ಅಂಬವ್ವ, ವೀರಯ್ಯ, ಬಸವರೆಡ್ಡಿ ರಡ್ಡೇರ, ಮೈಲಾರಪ್ಪ, ಮರಿಯಪ್ಪ, ವೀರಪ್ಪ, ಯಲ್ಲಪ್ಪ, ಗಂಗಪ್ಪ, ಪರಶುರಾಮ, ಕಾಶಯ್ಯ, ವೇಂಕಟೇಶ, ಶ್ರೀನಿವಾಸ, ಹನುಮಂತಪ್ಪ, ಭೀಮಪ್ಪ, ಶಂಕರಯ್ಯ , ದೇವಪ್ಪ, ಶಿಂದ್ಲಿಗಪ್ಪ, ವೆಂಕಟೇಶ, ಷರೀಪ್ ಬೆಳಗಟ್ಟಿ, ಶಂಕ್ರಪ್ಪ ಚೌಟಗಿ, ರಮೇಶ ಕರಡಿ, ಕೊಟ್ರಯ್ಯ ಶಶಿ, ಹನುಮಪ್ಪ, ಮಹೇಶ್, ತಿಪ್ಪಣ್ಣ, ತಿಮ್ಮಣ್ಣ, ಶರಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.