ADVERTISEMENT

ಬಾಲ್ ಬ್ಯಾಡ್ಮಿಂಟನ್: ಕಲಬುರಗಿ ವಲಯಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:38 IST
Last Updated 13 ಜನವರಿ 2026, 5:38 IST
<div class="paragraphs"><p>ಕೊಪ್ಪಳದಲ್ಲಿ ನಡೆದ ರಾಜ್ಯಮಟ್ಟದ ಬಾಲ್‌ ಬ್ಯಾಡ್ಮಿಂಟನ್‌ನ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಾಂಪಿಯನ್‌ ಆದ ಕಲಬುರಗಿ ವಿಭಾಗೀಯ ತಂಡ</p></div>

ಕೊಪ್ಪಳದಲ್ಲಿ ನಡೆದ ರಾಜ್ಯಮಟ್ಟದ ಬಾಲ್‌ ಬ್ಯಾಡ್ಮಿಂಟನ್‌ನ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಾಂಪಿಯನ್‌ ಆದ ಕಲಬುರಗಿ ವಿಭಾಗೀಯ ತಂಡ

   

ಕೊಪ್ಪಳ: ಲೀಗ್‌ ಪಂದ್ಯಗಳಿಂದಲೂ ಉತ್ತಮ ಪ್ರದರ್ಶನ ತೋರಿದ ಕಲಬುರಗಿ ವಲಯದ ತಂಡದವರು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಮುಗಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯ 14 ವರ್ಷದ ಒಳಗಿನವರ ಬಾಲಕರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಕಲಬುರಗಿ ವಿಭಾಗದ ಬಾಲಕರ ತಂಡದವರು ಲೀಗ್‌ ಹಂತದಿಂದ ಆರು ಅಂಕಗಳನ್ನು ಪಡೆದರೆ, ರನ್ನರ್ಸ್‌ ಅಪ್‌ ಸ್ಥಾನ ಗಳಿಸಿದ ಮೈಸೂರು ವಿಭಾಗದ ತಂಡದವರು ನಾಲ್ಕು ಅಂಕಗಳನ್ನು ಗಳಿಸಿದರು. ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ಚಾಂಪಿಯನ್‌ ಆದರೆ, ಬೆಳಗಾವಿ ವಿಭಾಗ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿತು.

ADVERTISEMENT

17 ವರ್ಷದ ಒಳಗಿನವರ ಬಾಲಕರ ವಿಭಾಗದಲ್ಲಿ ಮೈಸೂರು ವಿಭಾಗ ಪ್ರಥಮ, ಬೆಂಗಳೂರು ವಿಭಾಗ ದ್ವಿತೀಯ ಸ್ಥಾನ ಗಳಿಸಿದರೆ, ಇದೇ ವಯೋಮಾನದ ಬಾಲಕಿಯರ ಹೋರಾಟದಲ್ಲಿಯೂ ಇವೇ ವಿಭಾಗದ ತಂಡಗಳು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನಗಳನ್ನು ಪಡೆದುಕೊಂಡವು.     

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜನೆಯಾಗಿದ್ದವು. ಉತ್ತಮ ಪ್ರದರ್ಶನ ತೋರಿದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ರಾಜ್ಯದ ನಾಲ್ಕು ವಿಭಾಗಗಳಿಂದ ಪ್ರತಿ ವಯೋಮಾನ ಹಾಗೂ ವಿಭಾಗದಲ್ಲಿ ತಲಾ ಒಂದು ತಂಡವನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗಿತ್ತು.