ADVERTISEMENT

ಭಾಗ್ಯವಂತಿದೇವಿ ಮೂರ್ತಿ ಪ್ರತಿಷ್ಠಾಪನೆ, ತುಲಾಭಾರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 12:53 IST
Last Updated 27 ಏಪ್ರಿಲ್ 2025, 12:53 IST
ಬಸವಕಲ್ಯಾಣ ತಾಲ್ಲೂಕಿನ ಕೌಡಿಯಾಳ(ಎಸ್)ದ ಭಾಗ್ಯವಂತಿದೇವಿ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಈಚೆಗೆ ಸಸ್ತಾಪುರ ಮಹಾದೇವಿತಾಯಿ ಅವರ ತುಲಾಭಾರ ನಡೆಸಲಾಯಿತು. ಶರಣೆ ಭಾಗ್ಯವಂತಿತಾಯಿ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಮಿಲಿಂದ ಕುಲಕರ್ಣಿ ಉಪಸ್ಥಿತರಿದ್ದರು

ಬಸವಕಲ್ಯಾಣ: ತಾಲ್ಲೂಕಿನ ಕೌಡಿಯಾಳ(ಎಸ್) ಗ್ರಾಮದ ಭಾಗ್ಯವಂತಿದೇವಿ ದೇವಸ್ಥಾನದಲ್ಲಿ ಈಚೆಗೆ ಮೂರ್ತಿ ಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಮೂರು ದಿನಗಳವರೆಗೆ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆದವು.

ಶರಣೆ ಭಾಗ್ಯವಂತಿತಾಯಿ ಅವರ ನೇತೃತ್ವದಲ್ಲಿ ಆಕರ್ಷಕ ಶಿಲಾಮೂರ್ತಿಯ ಪ್ರತಿಷ್ಠಾಪನಾ ಕಾರ್ಯ ಸಂಭ್ರಮದಿಂದ ನೆರವೆರಿತು. ಸಸ್ತಾಪುರ ಮಹಾದೇವಿತಾಯಿ ಅವರ ತುಲಾಭಾರ ನಡೆಸಲಾಯಿತು. ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಅಂಬಿಗರ ಚೌಡಯ್ಯ ಪೀಠದ ರತ್ನಾಕಾಂತ ಸ್ವಾಮೀಜಿ, ನಾಗರೆಡ್ಡಿ, ಮಿಲಿಂದ ಕುಲಕರ್ಣಿ ರಾಜೇಶ್ವರ, ವಿಜಯಕುಮಾರ ಕಮಲಾಪುರ ಮತ್ತಿತರರು ಪಾಲ್ಗೊಂಡಿದ್ದರು.

ಮೊದಲು ಮೂರ್ತಿಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ಪ್ರಮುಖ ರಸ್ತೆಯ ಮೂಲಕ ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ತರಲಾಯಿತು. ವಾದ್ಯ ಮೇಳದವರು ಪಾಲ್ಗೊಂಡಿದ್ದರು. ಮಹಿಳೆಯರು ಒಳಗೊಂಡು ಅನೇಕ ಭಕ್ತರು ಉಪಸ್ಥಿತರಿದ್ದರು. ಅನ್ನ ದಾಸೋಹ ಏರ್ಪಡಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.