ADVERTISEMENT

ಗಿಣಿಗೇರಾ-ಗೊಂಡಬಾಳ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 5:16 IST
Last Updated 20 ಸೆಪ್ಟೆಂಬರ್ 2022, 5:16 IST
ಕೊಪ್ಪಳ ತಾಲ್ಲೂಕಿನ ಗಿಣಿಗೇರಾ–ಗೊಂಡಬಾಳ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು
ಕೊಪ್ಪಳ ತಾಲ್ಲೂಕಿನ ಗಿಣಿಗೇರಾ–ಗೊಂಡಬಾಳ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು   

ಕೊಪ್ಪಳ: ಇಲ್ಲಿಗೆ ಸಮೀಪದ ಗಿಣಿಗೇರಾ–ಗೊಂಡಬಾಳ ಕಾಂಕ್ರಿಟ್‌ ರಸ್ತೆ ನಿರ್ಮಾಣದ ಕಾಮಗಾರಿಗೆ ಇತ್ತೀಚೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿ ‘ಗಿಣಿಗೇರಾ-ಗೊಂಡಬಾಳ ರಸ್ತೆ ಅಭಿವೃದ್ದಿ ಬಹುದಿನಗಳ ಕನಸಾಗಿತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಮೊದಲ ಹಂತದಲ್ಲಿ ಈ ರಸ್ತೆಯ ಅಭಿವೃದ್ದಿಗೆ ₹2 ಕೋಟಿ ಅನುದಾನ ಒದಗಿಸಲಾಗಿತ್ತು. ಈಗಾಗಲೇ 1.2 ಕಿ.ಮೀ ರಸ್ತೆ ನಿರ್ಮಾಣ ಆಗಿದೆ. ಇನ್ನುಳಿದ ಕಾಮಗಾರಿ ಪೂರ್ಣಗೊಳಿಸಲು ₹5.10 ಕೋಟಿ ಅನುದಾನ ಮೀಸಲಿಟ್ಟು ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದರು.

‘ಹೊಸಳ್ಳಿ, ಕಾಸನಕಂಡಿ, ಹಿರೇಬಗನಾಳ, ಹಾಲವರ್ತಿ ಹಾಗೂ ಕೊಪ್ಪಳ ರಸ್ತೆ ಅಭಿವೃದ್ದಿಗೆ ₹9.95 ಕೋಟಿ ಹಾಗೂ ಕಲ್ಮಲಾ-ಶಿಗ್ಗಾಂವ ರಸ್ತೆಯ ಅಭಿವೃದ್ದಿಗೆ ₹9.95 ಕೋಟಿ ಮೀಸಲಿಡಲಾಗಿದ್ದು, ಆ ಕಾಮಗಾರಿಗಳಿಗೂ ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಚಂದ್ರನ ಮುನಿರಾಬಾದ್, ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ ರಾಜೂ, ಮುಖಂಡರಾದ ಜಡಿಯಪ್ಪ ಬಂಗಾಳಿ, ಜಗದೀಶ ಕರ್ಕಿಹಳ್ಳಿ, ಬಸಣ್ಣ ಬಂಗಾಳಿ, ಬನ್ನೆಪ್ಪಗೌಡ, ಧರ್ಮರಾಜ ದೇವರಮನಿ, ಸೋಮಣ್ಣ ಬಾರಕೇರ್, ಕುಮಾರ ಮಜ್ಜಿಗಿ, ದೇವೆಂದ್ರಪ್ಪ ಮಜ್ಜಿಗೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.