ಹುಳ್ಕಿಹಾಳಕ್ಯಾಂಪ್ (ಕಾರಟಗಿ): ಮಕ್ಕಳ ಹುಟ್ಟುಹಬ್ಬವೆಂದರೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವುದು, ಸಿಹಿ ಹಂಚುವುದು, ಕೇಕ್ ಕತ್ತರಿಸಿ ಸಂಭ್ರಮಿಸುವುದು, ಅನ್ನದಾನ ಮಾಡುವುದು ಸಹಜ.
ಇದಕ್ಕೆ ವ್ಯತಿರಿಕ್ತವೆನ್ನುವಂತೆ ತಾಲ್ಲೂಕಿನ ಹುಳ್ಕಿಹಾಳಕ್ಯಾಂಪ್ ನಿವಾಸಿ ಹಾಗೂ ಹುಳ್ಕಿಹಾಳ ಗ್ರಾಮ ಪಂಚಾಯಿತಿ ಸಿಬ್ಬಂದಿ ಅಂಬಮ್ಮ ಪಾಂಡುರಂಗ ಎಂಬುವವರು ಸೋಮವಾರ ತಮ್ಮ ಮಗನ ಜನ್ಮದಿನದ ಪ್ರಯುಕ್ತ ಸ್ಮಶಾನದಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಅಂಬಮ್ಮಳ ಪತಿ ಪಾಂಡುರಂಗ ಪ್ರತಿಕ್ರಿಯಿಸಿ,‘ಮುಂದಿನ ಪೀಳಿಗೆ ನಮ್ಮನ್ನು ಸ್ಮರಿಸಲು ಗಿಡಮರಗಳನ್ನು ಬೆಳಸಬೇಕು’ ಎಂದರು. ನಾಗರಾಜ ಭೋವಿ, ದ್ಯಾಮಣ್ಣ, ಹನುಮಂತ, ಶರಣಪ್ಪ, ಯಮನೂರ ಇದ್ಲಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.