ADVERTISEMENT

ಬೂದಗುಂಪಾ: ಪೋಷಣ್ ಮಾಸಾಚರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 15:29 IST
Last Updated 23 ಸೆಪ್ಟೆಂಬರ್ 2022, 15:29 IST
ಕೊಪ್ಪಳ ತಾಲ್ಲೂಕಿನ ಬುದಗುಂಪಾದಲ್ಲಿ ಪೋಷಣ್‌ ಅಭಿಯಾನ ಕಾರ್ಯಕ್ರಮವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ ಉದ್ಘಾಟಿಸಿದರು
ಕೊಪ್ಪಳ ತಾಲ್ಲೂಕಿನ ಬುದಗುಂಪಾದಲ್ಲಿ ಪೋಷಣ್‌ ಅಭಿಯಾನ ಕಾರ್ಯಕ್ರಮವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ ಉದ್ಘಾಟಿಸಿದರು   

ಕೊಪ್ಪಳ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ವತಿಯಿಂದ ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಶುಕ್ರವಾರ ವಲಯ ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮನಡೆಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ ಮಾತನಾಡಿ ‘ಸಿರಿಧಾನ್ಯಗಳ ಬಳಕೆ ಗರ್ಭಿಣಿ ಬಾಣಂತಿಯರಲ್ಲಿ ರಕ್ತಹೀನತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಪೌಷ್ಠಿಕತೆಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಸಿರಿಧಾನ್ಯಗಳಲ್ಲಿದ್ದು, ಇವುಗಳ ಮಹತ್ವ ಅಪಾರವಾಗಿದೆ’ ಎಂದರು.

ಕೆ.ಎಚ್.ಪಿ.ಟಿ ಶಾಂತ ಮಾತನಾಡಿ ‘ಮಹಿಳೆಯರು ಬಲಿಷ್ಠರಾಗಲು ಸಿರಿಧಾನ್ಯಗಳು ಬಹುಮುಖ್ಯ ಪಾತ್ರ ವಹಿಸುತ್ತದೆ. ಸದೃಢ ರಾಷ್ಟ್ರದ ನಿರ್ಮಾಣದ ಮೈಲುಗಲ್ಲು ಸಿರಿಧಾನ್ಯ’ ಎಂದು ಅಭಿಪ್ರಾಯ ಪಟ್ಟರು.

ADVERTISEMENT

ಗ್ರಾಮ ಪಂಚಾಯತಿ ಅಧ್ಯಕ್ಷೆ ದ್ರಾಕ್ಷಾಯಿಣೆಮ್ಮ ಪಿ, ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ವಲಯದ ಮೇಲ್ವಿಚಾರಕಿಯರಾದ ಸುಮಂಗಲಾ, ಗಾಯತ್ರಿ, ಕಮಲಾಕ್ಷಿ, ಪೋಷಣ ಸಿಬ್ಬಂದಿ ಚೇಲನಾರಾಣಿ, ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.