ADVERTISEMENT

‘ಜಾಲತಾಣಗಳ ಪ್ರಭಾವ; ಪುಸ್ತಕ ಓದು ಕ್ಷೀಣ’

ಸಾಹಿತಿ ವಿಜಯಲಕ್ಷ್ಮಿಯವರ ‘ಅರಳದ ಅಲರು’, ‘ಶ್ರೀವಿಜಯ ಸ್ವಗತ’ ಕವನ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:39 IST
Last Updated 6 ಡಿಸೆಂಬರ್ 2021, 5:39 IST
ಕೊಪ್ಪಳದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಹಿತಿ ವಿಜಯಲಕ್ಷ್ಮಿ ಕೊಟಗಿ ಅವರ ‘ಅರಳದ ಅಲರು’, ‘ಶ್ರೀವಿಜಯ ಸ್ವಗತ’ ಕವನ ಸಂಕಲನವನ್ನು ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ ಬಿಡುಗಡೆ ಮಾಡಿದರು. ಪ್ರಜ್ಞಾ ಮತ್ತಿಹಳ್ಳಿ, ಶಾಂತಾದೇವಿ ಹಿರೇಮಠ, ರಾಮಣ್ಣ ಶ್ಯಾವಿ, ಈಶ್ವರ ಹತ್ತಿ, ವಿಜಯಲಕ್ಷ್ಮಿ ಕೊಟಗಿ ಇದ್ದರು
ಕೊಪ್ಪಳದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಹಿತಿ ವಿಜಯಲಕ್ಷ್ಮಿ ಕೊಟಗಿ ಅವರ ‘ಅರಳದ ಅಲರು’, ‘ಶ್ರೀವಿಜಯ ಸ್ವಗತ’ ಕವನ ಸಂಕಲನವನ್ನು ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ ಬಿಡುಗಡೆ ಮಾಡಿದರು. ಪ್ರಜ್ಞಾ ಮತ್ತಿಹಳ್ಳಿ, ಶಾಂತಾದೇವಿ ಹಿರೇಮಠ, ರಾಮಣ್ಣ ಶ್ಯಾವಿ, ಈಶ್ವರ ಹತ್ತಿ, ವಿಜಯಲಕ್ಷ್ಮಿ ಕೊಟಗಿ ಇದ್ದರು   

ಕೊಪ್ಪಳ: ‘ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ನೈಜ ಸಾಹಿತ್ಯಕ್ಕೆ ಹಿನ್ನಡೆಯಾಗಿದೆ.ಹೀಗಾಗಿ ಪುಸ್ತಕ ಓದಿನ ಪರಂಪರೆ ಕ್ಷೀಣವಾಗಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಕಳವಳ ವ್ಯಕ್ತಪಡಿಸಿದರು.

ಸ್ನೇಹಸ್ಪರ್ಶ ಪ್ರಕಾಶನ ಹಾಗೂ ಶಿಕ್ಷಕರ ಕಲಾ ಸಂಘದ ಸಹಯೋಗದೊಂದಿಗೆನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಹಿತಿ ವಿಜಯಲಕ್ಷ್ಮಿ ಕೊಟಗಿ ಅವರ ‘ಅರಳದ ಅಲರು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಒತ್ತಡದ ಬದುಕಿನ ಮಧ್ಯೆ ಪುಸ್ತಕ ಓದಿಗೆ ಸಮಯ ನೀಡಬೇಕು. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈಗಿನ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಿ ಕೊಡಬೇಕಾಗಿರುವುದು ಇಂದಿನ ಅತ್ಯಗತ್ಯವಾಗಿದೆ. ಮಾತೃ ಭಾಷೆಯನ್ನು ಕರಗತ ಮಾಡಿಕೊಂಡಾಗ ಮಾತ್ರ ಸಾಹಿತ್ಯ ರಚನೆ ಸಾಧ್ಯವಾಗುತ್ತದೆ. ಬಹುತೇಕ ಕನ್ನಡ ಮಾಧ್ಯಮದ ಹಿನ್ನೆಲೆಯನ್ನು ಒಳಗೊಂಡವರಿಂದ ಮಾತ್ರ ನೈಜ ಸಾಹಿತ್ಯ ಹೊರಬರಲು ಸಾಧ್ಯವಾಗುತ್ತದೆ’
ಎಂದರು.

‌ಹಿರಿಯ ಸಾಹಿತಿ ಶಾಂತಾದೇವಿ ಹಿರೇಮಠ ‘ಶ್ರೀವಿಜಯ ಸ್ವಗತ’ ಕೃತಿ ಬಿಡುಗಡೆಗೊಳಿಸಿಮಾತನಾಡಿ, ಸಾಹಿತ್ಯದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುವುದು ಸಂತಸದ ವಿಷಯ. ಮಹಿಳೆಯರು ಸಾಹಿತ್ಯ ರಚನೆಯಲ್ಲಿ ಹೆಚ್ಚು, ಹೆಚ್ಚು ತೊಡಗಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು.

ADVERTISEMENT

‘ಅರಳದ ಅಲರು’ ಕೃತಿಯ ಕುರಿತು ಶಿಕ್ಷಕರ ಕಲಾ ಸಂಘದ ಅಧ್ಯಕ್ಷ ರಾಮಣ್ಣ ಶ್ಯಾವಿ ಮಾತನಾಡಿ, ‘ಸಾಹಿತ್ಯವನ್ನು ಪ್ರೀತಿಸುವ ಗುಣ ಮತ್ತು ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ವಿಜಯಲಕ್ಷ್ಮಿ ಕೊಟಗಿ ಅವರ ಕೃತಿಗಳಲ್ಲಿ ಗ್ರಾಮೀಣ ಹಾಗೂ ನಗರದ ಭಾಷಾ ಸೊಗಡು, ವೈವಿಧ್ಯತೆ ಒಳಗೊಂಡಿದೆ’ ಎಂದರು.

‘ಶ್ರೀವಿಜಯ ಸ್ವಗತ’ ಕೃತಿ ಕುರಿತು ಧಾರವಾಡದ ಸಹಾಯಕ ಪ್ರಾಧ್ಯಾಪಕಿ ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ‘ಜೀವನದ ಮರ್ಮರ ಸಪ್ಪಳ, ಅಂತಕರಣದ ಪಿಸು ಮಾತುಗಳನ್ನು ಕಿವಿಗೆ ಹಾಕಿಕೊಳ್ಳಬೇಕು. ಹಾಗೂ ಅದನ್ನು ಮನಸ್ಸಿನ ಆಳಕ್ಕೆ ಇಳಿಸಿಕೊಂಡಾಗ ಮಾತ್ರ ಸಾಹಿತ್ಯದ ರಚನೆ ಸಾಧ್ಯವಾಗುತ್ತದೆ’ ಎಂದರು.

ಈ ನಿಟ್ಟಿನಲ್ಲಿ ಕೊಟಗಿಯವರು ಅತ್ಯಂತ ವೈವಿಧ್ಯ ಕತೆಗಳ ಮೂಲಕ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಬದುಕಿನಲ್ಲಿ ಅನುಭವವನ್ನು ಆಳಕ್ಕಿಳಿಸಿಕೊಂಡು ಬರೆಯಬೇಕು. ಬರೆಯುವಾಗ ನಮ್ಮ ಇರುವಿಕೆಯನ್ನು ಮರೆತಾಗ ಮಾತ್ರ ನೈಜ ಸಾಹಿತ್ಯ ಹೊರಬರಲು ಸಾಧ್ಯವಾಗುತ್ತದೆ’ ಎಂದರು.

ಹಿರಿಯ ಸಾಹಿತಿ ಈಶ್ವರ ಹತ್ತಿ ಮಾತನಾಡಿ, ಕೃತಿ ಬಿಡುಗಡೆಗೊಳ್ಳುವ ತನಕ ಮಾತ್ರ ಅದು ಕೃತಿಕಾರನ ಆಸ್ತಿ. ಕೃತಿ ಬಿಡುಗಡೆಗೊಂಡಾಗ ಅದು ಲೋಕದ ಆಸ್ತಿ. ಆಗ ಲೋಕದ ಸ್ಪಂದನೆಗೆ ಸಾಹಿತಿ ಕಿವಿಗೊಡಬೇಕು. ಅತ್ಯಂತ ನಿಷ್ಠುರ ಹಾಗೂ ಜವಾಬ್ದಾರಿಯಿಂದ ಮಾತ್ರ ನೈಜ ಕೃತಿ ಹೊರಬರಲು ಸಾಧ್ಯವಾಗುತ್ತದೆ’ ಎಂದರು.

ಸಾಹಿತಿ ವಿಜಯಲಕ್ಷ್ಮಿ ಕೊಟಗಿ ಮಾತನಾಡಿದರು.ಶಿಕ್ಷಕರ ಸಂಘದ ಪ್ರಾಣೇಶ ಪೂಜಾರ್ ಕೃತಿಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು.

ಫಕೀರಪ್ಪ ಗುಳದಳ್ಳಿ ಹಾಗೂ ಮಂಜುನಾಥ ಪೂಜಾರ ಪ್ರಾರ್ಥನೆ ಗೀತೆ ಹಾಡಿದರು. ದಯಾನಂದ ಸಾಗರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.