ADVERTISEMENT

ಕುಕನೂರು: ‘ಗೃಹಲಕ್ಷ್ಮಿ’ ಹಣದಲ್ಲಿ ಮುಳ್ಳು ಕಂಟಿ ತೆರವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 23:30 IST
Last Updated 3 ಜೂನ್ 2025, 23:30 IST
ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿರುವ ಮುಳ್ಳುಕಂಟಿಯನ್ನು ರೈತ ಮಹಿಳೆ ಸವಿತಾ ಅವರು ಗೃಹಲಕ್ಷ್ಮಿ ಹಣದಲ್ಲಿ ಸ್ವಚ್ಛಗೊಳಿಸಿದರು 
ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿರುವ ಮುಳ್ಳುಕಂಟಿಯನ್ನು ರೈತ ಮಹಿಳೆ ಸವಿತಾ ಅವರು ಗೃಹಲಕ್ಷ್ಮಿ ಹಣದಲ್ಲಿ ಸ್ವಚ್ಛಗೊಳಿಸಿದರು    

ಕುಕನೂರು (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಯರೇಹಂಚಿನಾಳ ಗ್ರಾಮದಿಂದ ಕೊಟುಮಚಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 4 ಕಿ.ಮೀ. ಉದ್ದದ ರಸ್ತೆ ಬದಿ ಬೆಳೆದು ನಿಂತಿದ್ದ ಮುಳ್ಳುಕಂಟಿಯನ್ನು ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸವಿತಾ ಉಮೇಶ ನಾಗರಡ್ಡಿ ಅವರು ‘ಗೃಹಲಕ್ಷ್ಮಿ’ ಹಣದಿಂದ ಸ್ವಚ್ಛಗೊಳಿಸಿದ್ದಾರೆ.

‘ಹೊಲಗಳಿಗೆ ಹೋಗುವ ರಸ್ತೆ ಬಹಳ ಕಿರಿದಾಗಿತ್ತು. ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿತ್ತು. ಹೀಗಾಗಿ ‘ಗೃಹಲಕ್ಷ್ಮಿ’ ಯೋಜನೆಯ ₹ 22 ಸಾವಿರ ಹಣದಿಂದ ಜೆಸಿಬಿ ಬಳಸಿ ಮುಳ್ಳು ಜಾಲಿಯನ್ನು ಸ್ವಚ್ಛಗೊಳಿಸಿದ್ದೇನೆ’ ಎಂದು ಸವಿತಾ ಹೇಳಿದರು.

‘ಮುಳ್ಳುಕಂಟಿ ತೆರವುಗೊಳಿಸಿ ರಸ್ತೆ ಅಭಿವೃದ್ಧಿಪಡಿಸಿ ಎಂದು ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ, ಸವಿತಾ ಅವರು ಗೃಹಲಕ್ಷ್ಮಿ ಹಣವನ್ನು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಬಳಸಿರುವುದು ಶ್ಲಾಘನೀಯ ಕೆಲಸ’ ಎಂದು ರೈತ ಸಂಘದ ಅಧ್ಯಕ್ಷ ಅಂದಪ್ಪ ಕೋಳೂರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.