ತಾವರಗೇರಾ: ಸಮೀಪದ ಕಳಮಳ್ಳಿ ಗ್ರಾಮದ ಹೊರ ವಲಯದಲ್ಲಿ ಕಲ್ಲುಗಣಿಗಾರಿಕೆ ನಡೆಸಿ ಬೃಹತ್ ಗಾತ್ರದ ಗುಂಡಿಗಳಿಗೆ ತಂತಿಬೇಲಿ ಅಳವಡಿಸದೆ ಬಿಟ್ಟಿರುವವರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಹೂಲಗೇರಾ ಗ್ರಾಮದ ರೇಖಪ್ಪ ರಾಠೋಡ್, ಇಳಕಲ್‌ನ ರಿಯಾನ್ ಬಾನು ಹುಮನಾಬಾದ್ ಅವರು ಈ ಹಿಂದೆ ಕಳಮಳ್ಳಿ ಸೀಮೆಯ ಸರ್ವೆ ನಂಬರ್ 25/9/15 ಮತ್ತು 25/9/20 ರಲ್ಲಿ ಕಲ್ಲುಗಣಿಗಾರಿಕೆ ನಡೆಸಿದ್ದರು. ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದವು. ತಂತಿಬೇಲಿ ಅಳವಡಿಸಿರಲಿಲ್ಲ. ಈ ಇಬ್ಬರ ವಿರುದ್ಧ ಸ್ಥಳೀಯ ಪ್ರಕರಣ ದಾಖಲಾಗಿದೆ’ ಎಂದು ಪಿಎಸ್‌ಐ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.