ADVERTISEMENT

ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಅನುಸರಿಸಲ್ಲ: ಶಿವರಾಜ ತಂಗಡಗಿ

ಗಂಗಾವತಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 7:26 IST
Last Updated 20 ನವೆಂಬರ್ 2025, 7:26 IST
ಗಂಗಾವತಿ ನಗರದ ಮಹಾವೀರ ವೃತ್ತದಲ್ಲಿ ಸೋಮವಾರ ₹21.33 ಕೋಟಿ ವೆಚ್ಚದಲ್ಲಿ ಗಂಗಾವತಿ ನಗರದ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಶಿವರಾಜ ತಂಗಡಗಿ, ಶಾಸಕ ಜಿ.ಜನಾರ್ದನರೆಡ್ಡಿ ಭೂಮಿಪೂಜೆ ನೆರವೇರಿಸಿದರು
ಗಂಗಾವತಿ ನಗರದ ಮಹಾವೀರ ವೃತ್ತದಲ್ಲಿ ಸೋಮವಾರ ₹21.33 ಕೋಟಿ ವೆಚ್ಚದಲ್ಲಿ ಗಂಗಾವತಿ ನಗರದ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಶಿವರಾಜ ತಂಗಡಗಿ, ಶಾಸಕ ಜಿ.ಜನಾರ್ದನರೆಡ್ಡಿ ಭೂಮಿಪೂಜೆ ನೆರವೇರಿಸಿದರು   

ಗಂಗಾವತಿ: ಕಾಂಗ್ರೆಸ್ ಪಕ್ಷ ಅಭಿವೃದ್ಧಿ ವಿಚಾರದಲ್ಲಿ ಯಾವ ತ್ತು ತಾರತಮ್ಯ ನೀತಿ ಅನುಸರಿಸಲ್ಲ. ತಾರತಮ್ಯ ನೀತಿ ಅ ನುಸರಿವುದು ಕಲಿಸಿಕೊಟ್ಟಿರುವುದೇ ಬಿಜೆಪಿಗರು. ಸಿಎಂ ಸಿದ್ದರಾಮಯ್ಯ ರಾಜ್ಯದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಅನು ದಾನ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವ ರಾಜ ತಂಗಡಗಿ ಹೇಳಿದರು.

ನಗರದ ಮಹಾವೀರ ವೃತ್ತದಲ್ಲಿ ಸೋಮವಾರ ಸಿಎಂ ಅಮೃತ ನಗರೋತ್ಥಾನ ಯೋಜನೆ 4ನೇ ಹಂತದ ₹21.33 ಕೋ ಟಿ ವೆಚ್ಚದಲ್ಲಿ ಗಂಗಾವತಿ ನಗರದ ರಸ್ತೆ, ಚರಂಡಿ, ಕುಡಿಯು ವ ನೀರು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂ ಮಿ ಪೂಜೆ ನೆರವೇರಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎರಡು ಬಾರಿ ಸಚಿವನಾಗಿ ಕನಕಗಿರಿ,ಕಾರಟಗಿ ಸೇರಿ ಗಂಗಾ ವತಿ ಕ್ಷೇತ್ರಗಳ ಅಭಿವೃದ್ಧಿ ಸಾಕಷ್ಟು ಶ್ರಮಿಸಿದ್ದೇನೆ. ಈಗಲೂ ಅದೇ ದೃಷ್ಟಿಕೋನವೇ ಇದೆ. ಗಂಗಾವತಿ ಅಭಿವೃದ್ಧಿ ವಿಚಾರ ದಲ್ಲಿ ನಾನು ಮತ್ತು ಶಾಸಕ ಜಿ.ಜನಾರ್ದನರೆಡ್ಡಿ ಸಹೋದರ ರಂತೆ ಕೆಲಸ ಮಾಡುತ್ತೇವೆ. ಗಂಗಾವತಿ ನಗರದ ಅಭಿವೃದ್ದಿ ಕಾಮಗಾರಿಗಳ ವಿಚಾರದಲ್ಲಿ ಕೆಲ ಗುತ್ತಿಗೆದಾರರು, ಸದಸ್ಯ ರು, ಸಾರ್ವಜನಿಕರು ಪದೆ ಪದೆ ಕೋರ್ಟ್ ಮೊರೆಗೆ ಹೋಗಿ ಸ್ಟೇ ತರುತ್ತಿದ್ದು, ಕಾಮಗಾರಿಗಳು ನಿಲ್ಲುತ್ತಿವೆ.

ADVERTISEMENT

ಸದ್ಯ ಎಲ್ಲ ಸಮಸ್ಯೆಗಳನ್ನು ಕ್ಷೇತ್ರದ ಶಾಸಕರು ಪರಿಹರಿಸಿ, ಕಾಮಗಾರಿಗಳಿಗೆ ಪೂಜೆ ನಡೆಸಿದ್ದಾರೆ. ಗಂಗಾವತಿ ನಗರದ ಅಭಿವೃದ್ಧಿಗೆ ಸಿಎಂ ಹೆಚ್ಚುವರಿಯಾಗಿ ₹25 ಕೋಟಿ, ಸ್ಥಳೀ ಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ₹15 ಕೋಟಿ ಬಿಡು ಗಡೆ ಮಾಡುವ ಭರವಸೆ ನೀಡಿದ್ದಾರೆ. ಗಂಗಾವತಿ ಅಭಿವೃದ್ಧಿ ಗೆ ಎಲ್ಲರ ಸಹಕಾರ ತುಂಬ ಅಗತ್ಯ ಎಂದರು.

ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ಗಂಗಾವತಿ ಕ್ಷೇತ್ರ ದಿಂದ ಚುನಾವಣೆಗೆ ನಿಂತಾಗ, ಕ್ಷೇತ್ರದ ಜನರು ಅಭೂತ ಪೂರ್ವ ಗೆಲುವು ನೀಡಿದ್ದಾರೆ.ಜನರಿಗೆ ಕ್ಷೇತ್ರ ಅಭಿವೃದ್ಧಿ ಮಾ ಡುವುದಾಗಿ ಮಾತು ಕೊಟ್ಟಿದ್ದೆ.ಅದರಂತೆ ಕೆಲಸ ಮಾಡುತ್ತಿ ದ್ದು, ಕೆಲ ತಾಂತ್ರಿಕ ಸಮಸ್ಯೆ, ಅನುದಾನ ಬಿಡುಗಡೆ ಕೊರತೆ ಯಿಂದ ಗಂಗಾವತಿ ನಗರದ ಅಭಿವೃದ್ಧಿ ನಿರೀಕ್ಷೆಯಂತೆ ಆಗು ತ್ತಿಲ್ಲ.

ಕೆಲವು ವಿವಾದಗಳಿಂದ ಪ್ರಮುಖ ಯೋಜನೆಯಲ್ಲೊಂದಾ ದ ನಗರೋತ್ಥಾನ ಯೋಜನೆ ಕಾಮಗಾರಿ ವಿಳಂಬವಾಗಿದೆ. ₹21 ಕೋಟಿ ವೆಚ್ಚದ ಕಾಮಗಾರಿ 15 ವಾರ್ಡ್ ಗಳಿಗೆ ಹಂಚಿ ಕೆ ಮಾಡಲಾಗಿದೆ. ಇನ್ನೂ ₹25 ಕೋಟಿ ಅನುದಾನ ಬರಲಿ ದ್ದು, ಎಲ್ಲ ವಾರ್ಡ್ ಗಳ ಅಭಿವೃದ್ಧಿಗೆ ಹಂಚಿಕೆ ಮಾಡಲಾಗು ತ್ತದೆ. ಇನ್ನೂ ಎರಡು ವರ್ಷದಲ್ಲಿ ಜನರ ನಿರೀಕ್ಷೆಯಂತೆ ನಾ ನು ಗಂಗಾವತಿ ಅಭಿವೃದ್ಧಿ ಮಾಡಿ ತೊರಿಸುತ್ತೇನೆ.

ಮುಂದೆ ಗಂಗಾವತಿ ನಗರದ ಅಭಿವೃದ್ಧಿಗಾಗಿ ಕೇಂದ್ರಕ್ಕೆ ₹ 500 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಸಕಾರಾತ್ಮಕ ವಿಚಾರ ತಿಳಿದು ಬಂದಿದೆ. ಮುಂದಿನ ದಿನಗಳ್ಲಿ ಅಂಜನಾದ್ರಿ, ಗಂಗಾವತಿ ನಗರವನ್ನ ಮೈಸೂರು, ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ, ಡಿ.ಸಿ ಸುರೇಶ ಬಿ ಇಟ್ನಾಳ, ಜಿ‌.ಪಂ ಸಿಇಓ ವರ್ಣೀತ್ ನೇಗಿ, ಪೌರಾಯುಕ್ತ ವಿರುಪಾಕ್ಷಮೂರ್ತಿ, ನಗರಸಭೆ ಸದಸ್ಯರಾದ ರಮೇಶ ಚೌಡ್ಕಿ, ವಾಸುದೇವ ನವಲಿ,ಉಮೇಶ ಸಿಂಗನಾಳ, ಪರಶುರಾಮ ಮಡ್ಡೇರ, ನವೀನ ಮಾಲಿ ಪಾಟೀಲ, ಶ್ಯಾ ಮೀದ್ ಮನಿಯಾರ್, ಸೋಮನಾಥ ಭಂಡಾರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಸೇರಿ ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.