ADVERTISEMENT

ಪೊಲೀಸರೊಂದಿಗೆ ವಾಗ್ವಾದ 40 ಜನರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:46 IST
Last Updated 19 ಸೆಪ್ಟೆಂಬರ್ 2021, 4:46 IST

ಕೊಪ್ಪಳ: ನ್ಯಾ.ಸದಾಶಿವ ಆಯೋಗ ಜಾರಿಗೆ ಒತ್ತಾಯಿಸಿ ಮಾದಿಗ ಸಮಾಜದ ವಿವಿಧ ಸಂಘಟನೆಗಳು ಶುಕ್ರವಾರ ನಗರದಲ್ಲಿ ನಡೆಸಿದ ಬೃಹತ್‌ ಪ್ರತಿಭಟನೆ ಸಂದರ್ಭದಲ್ಲಿ ಟಯರ್ ಸುಟ್ಟ ವಿಚಾರದಲ್ಲಿ ಪೊಲೀಸ್‌ ಸಿಬ್ಬಂದಿ ಜೊತೆ ನಡೆದ ವಾಗ್ವಾದ ಹಾಗೂ ಎಳೆದಾಡಿದ ಪ್ರಸಂಗಗಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.

ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರಾ, ಮಾದಿಗ ಮಹಾಸಭೆಯಿಂದ ನಡೆದ ಪ್ರತಿಭಟನೆ ತಾಲ್ಲೂಕು ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳುವಾಗ ಬಸವೇಶ್ವರ ವೃತ್ತದಲ್ಲಿ ಸಮಿತಿ ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಿದರು. ಇದನ್ನು ತಡೆಯಲು ಮಫ್ತಿಯಲ್ಲಿ ಇದ್ದ ಪೊಲೀಸ್‌ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ ಎಳೆದಾಡಿದರೆನ್ನಲಾಗಿದೆ.

ಸಮಿತಿ ಮುಖಂಡರು ಸೇರಿದಂತೆ ಇತರೆ 40 ಜನರ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯಿಂದ ದೂರು ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.