ADVERTISEMENT

ಬೆಲೆ ಏರಿಕೆ: ಸಿಪಿಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 5:17 IST
Last Updated 12 ಏಪ್ರಿಲ್ 2022, 5:17 IST
ಗಂಗಾವತಿ ಪಟ್ಟಣದಲ್ಲಿ ಸಿಪಿಐ ಮುಖಂಡರು ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಗಂಗಾವತಿ ಪಟ್ಟಣದಲ್ಲಿ ಸಿಪಿಐ ಮುಖಂಡರು ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಗಂಗಾವತಿ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ ಮುಖಂಡರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಸಮಿತಿಯ ಕಾರ್ಯದರ್ಶಿ ಎ. ಹುಲಗಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪು ನಿರ್ಧಾರಗಳಿಂದ ಬಡ ಜನರು, ರೈತರು, ಕಾರ್ಮಿಕರ ಜೀವನ ನಡೆಯುವುದೇ ಕಷ್ಟಕರವಾಗಿದೆ. ಬಿಜೆಪಿ ಪಕ್ಷ ದ್ವಂದ್ವ ನಿರ್ಧಾರಗಳಿಂದ ಕಾರ್ಪೋರೆಟ್ ಉದ್ಯಮಿಗಳಿಗೆ ಒಳಿತು ಮಾಡಲು, ಬಡ ಜನರಿಗೆ ಬೆಲೆ ಏರಿಕೆ ತಟ್ಟಿಸಿ ಬಲಿ ಪಶುಗಳನ್ನಾಗಿ ಮಾಡುತ್ತಿದೆ ಎಂದರು.

ಜನ ವಿರೋಧಿ, ರೈತ ವಿರೋಧಿ ಯೋಜನೆಗಳನ್ನು ಜಾರಿ ಮಾಡುವ ಬಿಜೆಪಿ ಪಕ್ಷವನ್ನು ಸಾರ್ವಜನಿಕರು ಕಿತ್ತು ಒಗೆಯಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನೆಲೆ ಕಾಣದಂತೆ ಮಾಡಬೇಕು ಎಂದು ಸಂಘಟನೆಗಳಿಗೆ ಕಿವಿಮಾತು ಹೇಳಿದರು.

ADVERTISEMENT

ಪ್ರಮುಖರಾದ ಯಮನೂರಪ್ಪ, ಕನಕರಾಯ, ಲಕ್ಷ್ಮಣ ನಾಯಕ, ಬಾಳಪ್ಪ ಸಿಂಗನಾಳ, ಕರಿಯಪ್ಪ ಸಿಂಗನಾಳ, ಶೇಖಮ್ಮ ಹೊಸಳ್ಳಿ,ಗಂಗಮ್ಮ, ನಿಂಗಮ್ಮ, ಮರಿಯಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.