ADVERTISEMENT

ಮಾಳಕೊಪ್ಪದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 16:00 IST
Last Updated 28 ಏಪ್ರಿಲ್ 2025, 16:00 IST
ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮಸ್ಥರು ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿದರು
ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮಸ್ಥರು ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿದರು   

ಕುಕನೂರು: ತಾಲ್ಲೂಕಿನ ಮಾಳೆಕೊಪ್ಪ ಗ್ರಾಮದಲ್ಲಿ ನೀರು ಸರಬರಾಜು ಮಾಡುವ ಮೋಟಾರ್ ಕೆಟ್ಟ ಪರಿಣಾಮ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಕಳೆದ ಒಂದು ವಾರದಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ಕುರಿತು ಗ್ರಾಮ ಪಂಚಾಯಿತಿಯವರ ಗಮನಕ್ಕೆ ತರಲಾಗಿದೆ. ಇಂದು–ನಾಳೆ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಮಾಳೆಕೊಪ್ಪ ಗ್ರಾಮಕ್ಕೆ ಬರುವ ನೀರಿನ ಮೂಲಗಳಾದ ಬನ್ನಿಕೊಪ್ಪ ಸಂಪ್ ಹೌಸ್ ಮೋಟಾರ್, ಕೊಳವೆಬಾವಿಯ ಮೋಟಾರ್, ಎಲ್ ಆಂಡ್ ಟಿ ನೀರು ಸರಬರಾಜು ಮೋಟಾರ್ ಕೆಟ್ಟ ಪರಿಣಾಮ ಕಳೆದ ಐದಾರು ದಿನಗಳಿಂದ ಹನಿ ನೀರಿಗೂ ಪರದಾಡಬೇಕಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.