ADVERTISEMENT

ಕಣಿವೆ ಉದ್ಭವ ಆಂಜನೇಯ ದೇವಸ್ಥಾನ ಗೋಪುರ ಕಳಸ ಪ್ರತಿಷ್ಠಾಪನೆ 10ಕ್ಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2019, 14:16 IST
Last Updated 4 ಮೇ 2019, 14:16 IST
ಗಂಗಾವತಿ ತಾಲ್ಲೂಕಿನ ಸಂಗಾಪುರ ಗ್ರಾಮದ ಕಣಿವೆ ಉದ್ಭವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಶನಿವಾರ ದೇವಸ್ಥಾನದ ಮಂಡಳಿ ಸದಸ್ಯರು ಬಿಡುಗಡೆ ಮಾಡಿದರು
ಗಂಗಾವತಿ ತಾಲ್ಲೂಕಿನ ಸಂಗಾಪುರ ಗ್ರಾಮದ ಕಣಿವೆ ಉದ್ಭವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಶನಿವಾರ ದೇವಸ್ಥಾನದ ಮಂಡಳಿ ಸದಸ್ಯರು ಬಿಡುಗಡೆ ಮಾಡಿದರು   

ಗಂಗಾವತಿ: ತಾಲ್ಲೂಕಿನ ಸಂಗಾಪುರ ಗ್ರಾಮದ ಶ್ರೀ ಕಣಿವೆ ಉದ್ಭವ ಆಂಜನೇಯ ದೇವಸ್ಥಾನದ ಮುಖಮಂಟಪ, ಗೋಪುರ ಕಳಸ ಹಾಗೂ ಧ್ವಜಸ್ಥಂಭ ಪ್ರತಿಷ್ಠಾಪನಾ ಕಾರ್ಯಕ್ರಮ ಮೇ 10ರಂದು ನಡೆಯಲಿದೆ ಎಂದು ಆಂಜನೇಯಸ್ವಾಮಿ ದೇವಸ್ಥಾನ ಮಂಡಳಿ ತಿಳಿಸಿದೆ.

ಬೆಳಿಗ್ಗೆ 10.25 ರಿಂದ 11 ಗಂಟೆಯವರೆಗೆ ಸಲ್ಲುವ ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ದೇವಸ್ಥಾನದ ಮುಖಮಂಟಪ, ಗೋಪುರ ಕಳಸ, ಧ್ವಜಸ್ಥಂಭ ಪ್ರತಿಷ್ಠಾಪನಾ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಮಂಡಳಿಯ ಅಧ್ಯಕ್ಷ ಎಸ್. ಲಕ್ಷ್ಮೀನಾರಾಯಣ ಹಾಗೂ ಖಜಾಂಚಿ ಲಿಂಗಪ್ಪ ಜನಾದ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT