ADVERTISEMENT

ಕಾರಟಗಿ | ರಾಜ್‌ಕುಮಾರ ಜನ್ಮದಿನ: ಬಟ್ಟೆ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 15:39 IST
Last Updated 24 ಏಪ್ರಿಲ್ 2025, 15:39 IST
ಕಾರಟಗಿಯಲ್ಲಿ ಡಾ. ರಾಜಕುಮಾರ ಹುಟ್ಟುಹಬ್ಬದ ನಿಮಿತ್ತ ಗುರುವಾರ ಅಂಗವಿಕಲ ಆಲಂಭಾಷಾಗೆ ಬಟ್ಟೆಗಳನ್ನು ವಿತರಿಸಲಾಯಿತು
ಕಾರಟಗಿಯಲ್ಲಿ ಡಾ. ರಾಜಕುಮಾರ ಹುಟ್ಟುಹಬ್ಬದ ನಿಮಿತ್ತ ಗುರುವಾರ ಅಂಗವಿಕಲ ಆಲಂಭಾಷಾಗೆ ಬಟ್ಟೆಗಳನ್ನು ವಿತರಿಸಲಾಯಿತು   

ಕಾರಟಗಿ: ಚಲನಚಿತ್ರ ರಂಗದಲ್ಲಿ ಅಜರಾಮರಾಗಿ, ಜನಮಾನಸದಲ್ಲಿ ಶಾಸ್ವತವಾಗಿ ಉಳಿದಿರುವ ಡಾ.ರಾಜಕುಮಾರ ಜನ್ಮದಿನವನ್ನು ಅಭಿಮಾನಿಗಳು ಗುರುವಾರ ಸಡಗರ, ಸಂಭ್ರಮದೊಂದಿಗೆ ಆಚರಿಸಿದರು.

ಪಟ್ಟಣದ ಡಾ.ರಾಜಕುಮಾರ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಬೆಳಿಗ್ಗೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಯಮನೂರಪ್ಪ ಪ್ರತಿಕ್ರಿಯಿಸಿ, ‘ಡಾ.ರಾಜಕುಮಾರ ಅವರ ಅಮೋಘ ಅಭಿನಯ ಜನರ ಮನಸ್ಸಿನಲ್ಲಿ ಇಂದಿಗೂ ಉಳಿದಿದೆ. ಅವರ ಅಭಿನಯ, ಅವರ ಚಿತ್ರಗಳಲ್ಲಿಯ ಉತ್ತಮ ಸಂದೇಶ ಸಾರಿ, ಜೀವನದ ಪಾಠವಾಗಿರುತ್ತಿದ್ದವು. ಇಂದಿಗೂ ಅವರ ಚಲನಚಿತ್ರಗಳ ಹಾಡುಗಳು ಜನಸಾಮಾನ್ಯರ ಬಾಯಲ್ಲಿ ಗುನುಗುಡುತ್ತಿವೆ. ಚಲನಚಿತ್ರದ ಜತೆಗೆ ಪ್ರಚಲಿತ ವಿದ್ಯಮಾನಗಳಿಗೆ ತಮ್ಮದೇ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ’ ಎಂದರು.

ADVERTISEMENT

ಅಂಗವಿಲಕರಾದ ಆಲಂಭಾಷಾ ಮತ್ತು ಸಿದ್ದಮ್ಮಗೆ ಅವರಿಗೆ ಬಟ್ಟೆ ವಿತರಿಸಲಾಯಿತು. ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಸಂಘದ ಉಪಾಧ್ಯಕ್ಷ ಬಿ. ಮಲ್ಲಿಕಾರ್ಜುನ, ಪದಾಧಿಕಾರಿಗಳಾದ ನಾಗರಾಜ, ಅಣ್ಣಪ್ಪಸ್ವಾಮಿ, ಕೃಷ್ಣಯ್ಯ ಶೆಟ್ಟಿ, ವೆಂಕಟೇಶ ಬೋವಿ, ಕಾಶಿನಾಥ ಕಂಪ್ಲಿ, ಸಿಂಗಾಪುರ ಹನುಮಂತಪ್ಪ, ಮಲ್ಲಪ್ಪ ಕೋಟೆ, ವೆಂಕಟೇಶ ಭಜಂತ್ರಿ, ವೆಂಕಟೇಶ ಗಂಗಾಮತ ಸಹಿತ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.