ADVERTISEMENT

ಜಿಲ್ಲಾ ನ್ಯಾಯಾಲಯದಲ್ಲಿ ಇ–-ಲೋಕ ಅದಾಲತ್‌: 3,862 ಪ್ರಕರಣಗಳು ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 2:37 IST
Last Updated 22 ಸೆಪ್ಟೆಂಬರ್ 2020, 2:37 IST
ಕೊಪ್ಪಳ ನ್ಯಾಯಾಲಯಗಳಲ್ಲಿ ಸೋಮವಾರ ಜಿಲ್ಲಾ ನ್ಯಾಯಾಧೀಶೆ ಎಲ್‌.ವಿಜಯಲಕ್ಷ್ಮಿದೇವಿ ನೇತೃತ್ವದಲ್ಲಿ ನಡೆದ 'ಮೇಗಾ ಇ-–ಲೋಕ ಆದಾಲತ್‌'. ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಶ್ರೀನಿವಾಸ್ ಇದ್ದರು
ಕೊಪ್ಪಳ ನ್ಯಾಯಾಲಯಗಳಲ್ಲಿ ಸೋಮವಾರ ಜಿಲ್ಲಾ ನ್ಯಾಯಾಧೀಶೆ ಎಲ್‌.ವಿಜಯಲಕ್ಷ್ಮಿದೇವಿ ನೇತೃತ್ವದಲ್ಲಿ ನಡೆದ 'ಮೇಗಾ ಇ-–ಲೋಕ ಆದಾಲತ್‌'. ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಶ್ರೀನಿವಾಸ್ ಇದ್ದರು   

ಕೊಪ್ಪಳ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮೇಗಾ ಇ-ಲೋಕ್ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಒಟ್ಟು 3,862 ಪ್ರಕರಣಗಳ ಇತ್ಯರ್ಥಗೊಂಡಿವೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಗಂಗಾವತಿ, ಕುಷ್ಟಗಿ, ಯಲಬುರ್ಗಾ ಮತ್ತು ಕೊಪ್ಪಳ ನ್ಯಾಯಾಲಯಗಳಲ್ಲಿ 'ಮೇಗಾ ಇ-ಲೋಕ ಆದಾಲತ್‌'ನ್ನು ವೆಬಿನಾರ್‌ ಮೂಲಕ ಏರ್ಪಡಿಸಲಾಗಿತ್ತು.

ಅದಾಲತ್‌ನಲ್ಲಿ ನ್ಯಾಯಾಲಯ ದಲ್ಲಿರುವ ಚಾಲ್ತಿ ಪ್ರಕರಣಗಳು ಹಾಗೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ADVERTISEMENT

ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣ-79, ಸಿವಿಲ್ ಪ್ರಕರಣ-297, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣ-95,
ಚೆಕ್ ಬೌನ್ಸ್ ಪ್ರಕರಣ-26, ಇತರ ಕ್ರಿಮಿನಲ್ ಪ್ರಕರಣ-613, ವ್ಯಾಜ್ಯ ಇತರ ಪೂರ್ವ ಪ್ರಕರಣ-844, ವಿದ್ಯುತ್ ಅಥವಾ ನೀರಿನ ಬಿಲ್ ಪ್ರಕರಣ-330 ಹಾಗೂ ಇತರ ಪ್ರಕರಣ-1,578 ಸೇರಿದಂತೆ ಒಟ್ಟು-3,862 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿ ಒಟ್ಟು ₹‎ 7.05 ಕೋಟಿ ಮೊತ್ತದ ಪರಿಹಾರ ಹಣ ನೀಡಲು ಸೂಚಿಸಲಾಯಿತು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶೆ
ಹಾಗೂ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಲ್.ವಿಜಯಲಕ್ಷ್ಮಿದೇವಿ ಮತ್ತು ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಟಿ.ಶ್ರೀನಿವಾಸ ತಿಳಿಸಿದ್ದಾರೆ.

ಈ ಲೋಕ್ ಅದಾಲತ್‌ಗೆ ಸಹಕರಿಸಿದ ಜಿಲ್ಲೆಯ ಎಲ್ಲ ನ್ಯಾಯಾಧೀಶರಿಗೆ, ಸಂಧಾನಕಾರರಿಗೆ, ವಕೀಲರ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರಿಗೆ, ಬ್ಯಾಂಕ್ ಮತ್ತು ವಿಮಾ ಕಂಪನಿ ಮ್ಯಾನೇಜರ್‌ಗಳಿಗೆ, ಕಕ್ಷಿದಾರರಿಗೆ ಮತ್ತು ನ್ಯಾಯಾಲಯಗಳ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಅವರು
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.