ADVERTISEMENT

ವಿಶ್ವ ಆನೆಗಳ ದಿನಾಚರಣೆ: ಚಿತ್ರಕಲಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 13:21 IST
Last Updated 13 ಆಗಸ್ಟ್ 2023, 13:21 IST
ಗಂಗಾವತಿ ನಗರದ ಲಿಟಲ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಇನ್ನರ್ ವ್ಹೀಲ್‌ ವತಿಯಿಂದ ಶನಿವಾರ ವಿಶ್ವ ಆನೆಗಳ ದಿನಾಚರಣೆ ನಿಮಿತ್ತ ಆನೆ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು
ಗಂಗಾವತಿ ನಗರದ ಲಿಟಲ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಇನ್ನರ್ ವ್ಹೀಲ್‌ ವತಿಯಿಂದ ಶನಿವಾರ ವಿಶ್ವ ಆನೆಗಳ ದಿನಾಚರಣೆ ನಿಮಿತ್ತ ಆನೆ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು    

ಗಂಗಾವತಿ: ಇಲ್ಲಿನ ಲಿಟಲ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನರ್ ವ್ಹೀಲ್‌ ಕ್ಲಬ್ ವತಿಯಿಂದ ಶನಿವಾರ ವಿಶ್ವ ಆನೆಗಳ ದಿನಾಚರಣೆ ನಿಮಿತ್ತ ಆನೆಯ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 6 ಮತ್ತು 7ನೇ ತರಗತಿ ಯಿಂದ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ಗೋಣಿ ಚೀಲ ಬಳಸಿ ಬೃಹತ್ ಆನೆ ನಿರ್ಮಾಣ ಮಾಡಿದ ಲಿಟಲ್ ಹಾರ್ಟ್ಸ್ ಶಾಲೆಯ ಚಿತ್ರಕಲಾ ಶಿಕ್ಷಕಿ ಯಶೋಧ ಪತ್ತಾರ ಅವರನ್ನ ಇನ್ನರ್ ವೀಲ್ ಕ್ಲಬ್‌ನ ಸದಸ್ಯರು ಸನ್ಮಾನಿಸಿದರು‌.

ಮನೆಗಳಿಗೆ ಟೈಲ್ಸ್ ಹಾಕುವ ಕಾರ್ಮಿಕ ಸಂತೋಷ ಅವರ ಮಕ್ಕಳ ವಿದ್ಯಾಭ್ಯಾಸ ನೆರವಿಗೆ ಇನ್ನರ್‌ವ್ಹೀಲ್‌ ಕ್ಲಬ್ ಸದಸ್ಯೆ ಸುಜಾತ ರೆಡ್ಡಿ ₹25 ಸಾವಿರ ಹಣ ದೇಣಿಗೆ ನೀಡಿದರು.

ಇನ್ನರ್ ವ್ಹೀಲ್‌ ಕ್ಲಬ್‌ನ ಅಧ್ಯಕ್ಷೆ ಪ್ರಿಯಾಕುಮಾರಿ, ಖಜಾಂಚಿ ಮಂಜುಳ ಸಿಂಗನಾಳ, ರಜನಿ ಆಲಂಪಲ್ಲಿ ಸೇರಿ ಶಿಕ್ಷಕರು, ಶಿಕ್ಷಕಿಯರು, ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.