ADVERTISEMENT

‘ಸಕಾಲ’ದ ಸದುಪಯೋಗ ಪಡೆಯಿರಿ

ಸಪ್ತಾಹಕ್ಕೆ ಚಾಲನೆ: ಜೆಸ್ಕಾಂ ಎಂಜಿನಿಯರ್ ಎಚ್‌.ಎಂ.ನಟರಾಜ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 11:58 IST
Last Updated 14 ಡಿಸೆಂಬರ್ 2020, 11:58 IST
ಗಂಗಾವತಿಯ ಜೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ಸಕಾಲ ಸಪ್ತಾಹ ಜಾಗೃತಿ ವಾಹನಕ್ಕೆ ಚಾಲನೆ ನೀಡಲಾಯಿತು
ಗಂಗಾವತಿಯ ಜೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ಸಕಾಲ ಸಪ್ತಾಹ ಜಾಗೃತಿ ವಾಹನಕ್ಕೆ ಚಾಲನೆ ನೀಡಲಾಯಿತು   

ಗಂಗಾವತಿ: ‘ಜೆಸ್ಕಾಂ ವತಿಯಿಂದ ಡಿ.14 ರಿಂದ ಡಿ.19 ರವರೆಗೆ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ಸದುಪಯೋಗ ಪಡೆಯಬೇಕು’ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್‌.ಎಂ.ನಟರಾಜ್‌ ಮನವಿ ಮಾಡಿದ್ದಾರೆ.

ನಗರದ ಜೆಸ್ಕಾಂ ಕಚೇರಿಯಲ್ಲಿ ಸೋಮವಾರ ಸಕಾಲ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಆದೇಶದಂತೆ ಗಂಗಾವತಿ ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯ ಕುಷ್ಟಗಿ ಹಾಗೂ ಕಾರಟಗಿ ತಾಲ್ಲೂಕುಗಳಲ್ಲಿ ಸಪ್ತಾಹ ನಡೆಸಲಾಗುವುದು ಎಂದರು.

ADVERTISEMENT

ನಿಗದಿತ ಕಾಲಮಿತಿಯೊಳಗೆ ಸೇವೆ ಪಡೆಯುವ ಅಧಿಕಾರವನ್ನು ಗ್ರಾಹಕರು ಹೊಂದಿದ್ದು, ಏನೇ ತೊಂದರೆಗಳು ಇದ್ದರೂ, ಅದನ್ನು ಸಕಾಲದಲ್ಲಿ ನೋಂದಾಯಿಸಿದರೆ ತಕ್ಷಣ ಪರಿಹಾರ ಒದಗಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್‌ ಮಾತನಾಡಿ,‘ಸಕಾಲ ಸೇವೆ ಕೇವಲ ಒಂದು ಇಲಾಖೆಗೆ ಮಾತ್ರ ಸೀಮಿತವಾದದ್ದಲ್ಲ.ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಕಾಲದಲ್ಲಿ ನೋಂದಾಯಿಸುವ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಜೆಸ್ಕಾಂ ಸಕಾಲ ಸಪ್ತಾಹ ಜಾಗೃತಿ ವಾಹನಕ್ಕೆ ಚಾಲನೆ ನೀಡಲಾಯಿತು.

ಜೆಸ್ಕಾಂನ ಎಇಇ ಎ.ಆರ್‌.ಸಲೀಂ, ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ, ಕಾರ್ಮಿಕ ನಾಯಕ ಜಗನ್ನಾಥ ರಾಠೋಡ್‌, ಸಿಬ್ಬಂದಿಗಳಾದ ಜ್ಯೋತಿ, ಅಲ್ಲಾಭಕ್ಷಿ, ಖಾಜಾ ಮೈನುದ್ದೀನ್‌ ಹಾಗೂ ಎಚ್.ಬಿ.ನಾಗಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.