ADVERTISEMENT

ನಿರಂತರ ವಿದ್ಯುತ್‍ಗೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 6:46 IST
Last Updated 24 ಜನವರಿ 2021, 6:46 IST
ಹನುಮಸಾಗರ ಸುತ್ತಲಿನ ರೈತರು ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಹನುಮಸಾಗರ ಸುತ್ತಲಿನ ರೈತರು ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ಹನುಮಸಾಗರ: ಸುತ್ತಲಿನ ಗ್ರಾಮಗಳಾದ ಬಾದಿಮನಾಳ, ಜ್ಯಾಗೀರ ತಿಮ್ಮನಟ್ಟಿ, ವೆಂಕಟಾಪೂರ, ಗೊರೆಬಾಳ, ತುಮರಿಕೊಪ್ಪ ಭಾಗದ ರೈತರು, ನೀರಾವರಿ ಪಂಪ್‍ಸೆಟ್‍ಗಳಿಗೆ (ಐ.ಪಿ. ಸೆಟ್‌) ವಿದ್ಯುತ್ ತೊಂದರೆಯಾಗುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಇಲ್ಲಿನ ಜೆಸ್ಕಾಂ ಶಾಖಾ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.

ಬೆಳೆಗಳಿಗೆ ನೀರು ಒದಗಿಸಲು ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಈ ಕುರಿತು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ವಿದ್ಯುತ್ ಪೂರೈಕೆ ಸುಧಾರಣೆಯಾಗಿಲ್ಲ. ದಿನಕ್ಕೆ 7 ತಾಸು ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು.

ವಾರಿಕಲ್ ಒನ್‍ಟೆನ್ ಸ್ಟೇಷನ್‍ನಿಂದ ಬಾದಿಮನಾಳ ಕ್ರಾಸ್‍ವರೆಗಿನ ವಿದ್ಯುತ್ ತಂತಿ ಹಳೆಯದಾಗಿದೆ. ಬದಲಾವಣೆ ಮಾಡಿಕೊಡುವಂತೆ ಮನವಿ ಮಾಡಿದರು.

ADVERTISEMENT

ಜನ ಕಲ್ಯಾಣ ವೇದಿಕೆ ಅಧ್ಯಕ್ಷ ದೇವಪ್ಪ ಮೆಣಸಗಿ, ರೈತ ಸಂಘದ ಪ್ರಮುಖರಾದ ಯಮನೂರಪ್ಪ ಮಡಿವಾಳರ, ಬಸವರಾಜ ಮೋಟಗಿ, ಸಿರಾಜುದ್ದೀನ್ ಮೂಲಿಮನಿ, ಅಹ್ಮದ್ ಮುದಗಲ್, ರಾಮಪ್ಪ ವಾಲಿಕಾರ, ಶರಣಯ್ಯ ಸಾರಂಗಮಠ, ಮುತ್ತಪ್ಪ ವಾಲಿಕಾರ, ಮಲ್ಲಪ್ಪ ಬ್ಯಾಳಿ ಹಾಗೂ ಮಂಜಪ್ಪ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.