ಕೊಪ್ಪಳ: ‘ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ನಟಿಸಿ, ನಿರ್ಮಿಸಿದ ಕೋರ ಚಿತ್ರ ಏ.18ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ’ ಎಂದು ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸಿದ್ದು ಮಣ್ಣಿನವರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಬುಡಕಟ್ಟು ಸಮುದಾಯ ಕಥೆ ಆಧರಿಸಿದೆ. ನಮ್ಮವರೇ ಆದ ಮೂರ್ತಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸುನಾಮಿ ಕಿಟ್ಟಿ, ಚರಿಸ್ಮಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಮೂರು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗಲಿದೆ’ ಎಂದರು.
‘ಮೇಕಿಂಗ್ ಅದ್ದೂರಿಯಾಗಿದ್ದು, ಪ್ರೇಕ್ಷಕರು ಮೆಚ್ಚಿಕೊಳ್ಳುವ ಭರವಸೆ ಇದೆ. ಸೇನೆಯ ಎಲ್ಲ ಕಾರ್ಯಕರ್ತರು ಆಯಾ ಜಿಲ್ಲೆಯಲ್ಲಿ ಸಿನಿಮಾ ಬಿಡುಗಡೆಗೆ, ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದೇವೆ. ನಮ್ಮವರೆಲ್ಲ ಸೇರಿಕೊಂಡು ಮಾಡಿರುವ ಹೊಸ ಪ್ರಯೋಗ ಇದಾಗಿದ್ದು, ಚಿತ್ರರಂಗ ಅಪ್ಪಿ ಸ್ವಾಗತಿಸಬೇಕಿದೆ’ ಎಂದು ಮನವಿ ಮಾಡಿದರು.
ಸೇನೆ ಪದಾಧಿಕಾರಿಗಳಾದ ವೀರಭದ್ರ ನಾಯಕ ತಾಳಕೇರಿ, ರಮೇಶ ದೊಡ್ಮನಿ, ಮರಿಸ್ವಾಮಿ ಪೂಜಾರ, ಯಂಕಪ್ಪ ಹೊಸಳ್ಳಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.