ಕಾರಟಗಿ: ಮತದಾನ ಮಾಡುವುದನ್ನು ತಾನೇ ಚಿತ್ರೀಕರಿಸಿಕೊಂಡು, ತನ್ನ ಸ್ಟೇಟಸ್‌ನಲ್ಲಿ ಇಟ್ಟುಕೊಂಡು ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಯುವಕನ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಾಗಿದೆ.
ತಾಲ್ಲೂಕಿನ ಹಾಲಸಮುದ್ರ ಗ್ರಾಮದ ಕಿರಣ ಅಂಜನಪ್ಪ ಬೂದಗುಂಪಾ ವಿರುದ್ದ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಗೋಪ್ಯತೆ ಉಲ್ಲಂಘನೆಯ ಮೇಲೆ ಪ್ರಕರಣ ದಾಖಲಾಗಿದೆ.
ಫ್ಲೈಯಿಂಗ್ ಸ್ಕಾಡ್- 04 ಅಧಿಕಾರಿ ಹರೀಶ ಪತ್ತಾರ, ಕಿರಣ ವಿರುದ್ಧ ದೂರು ಸಲ್ಲಿಸಿದ್ದರು.
ಕಿರಣ ಮತದಾನ ಮಾಡುವ ವೇಳೆ ತನ್ನ ಮೊಬೈಲ್‌ನಲ್ಲಿ ಮತ ಚಲಾಯಿಸುವುದನ್ನು ಚಿತ್ರೀಕರಿಸಿ, ಬಳಿಕ ತನ್ನ ಸ್ಟೇಟಸ್‌ನಲ್ಲಿ ಇಟ್ಟುಕೊಂಡಿದ್ದನು. ಚುನಾವಣಾಧಿಕಾರಿಗಳಿಗೆ ವಿಡಿಯೊದ ತುಣುಕನ್ನು ಕೆಲವರು ಕಳುಹಿಸಿದ್ದರು.
ಪರಿಶೀಲಿಸಿದ ಬಳಿಕ ಅಧಿಕಾರಿ ದೂರು ಸಲ್ಲಿಸಿದರು. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.