ADVERTISEMENT

ಗದಗ ವಾಡಿ ನೂತನ ಮಾರ್ಗ: ಪ್ರಯಾಣಿಕ ರೈಲು ಸಂಚಾರ ಶೀಘ್ರ

ಗದಗ-ವಾಡಿ ನೂತನ ರೈಲ್ವೆ ಮಾರ್ಗ ಸಂಚಾರಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 16:17 IST
Last Updated 17 ಏಪ್ರಿಲ್ 2025, 16:17 IST
ಕುಷ್ಟಗಿ ರೈಲು ನಿಲ್ದಾಣವನ್ನು ಸಂಸದ ರಾಜಶೇಖರ ಹಿಟ್ನಾಳ ಗುರುವಾರ ಪರಿಶೀಲಿಸಿದರು
ಕುಷ್ಟಗಿ ರೈಲು ನಿಲ್ದಾಣವನ್ನು ಸಂಸದ ರಾಜಶೇಖರ ಹಿಟ್ನಾಳ ಗುರುವಾರ ಪರಿಶೀಲಿಸಿದರು   

ಕುಷ್ಟಗಿ: ಗದಗ ವಾಡಿ ನೂತನ ಮಾರ್ಗಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ನಿಲ್ದಾಣವನ್ನು ಸಂಸದ ಕೆ.ರಾಜಶೇಖರ ಹಿಟ್ನಾಳ ಗುರುವಾರ ಪರೀಲಿಸಿದರು.

ನಿಲ್ದಾಣದಲ್ಲಿ ಕೈಗೊಳ್ಳಲಾಗಿರುವ ಪ್ರಯಾಣಿಕರ ಪ್ಲಾಟ್‌ಫಾರ್ಮ್, ನಿಯಂತ್ರಣ ಕೊಠಡಿ ಸೇರಿದಂತೆ, ನೀರು, ನೈರ್ಮಲ್ಯ ವ್ಯವಸ್ಥೆಗೆ ಸಂಬಂಧಿಸಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ರೈಲು ನಿಲ್ದಾಣ ಕಲಾತ್ಮಕವಾಗಿ ಮತ್ತು ಮಾದರಿ ರೀತಿಯಲ್ಲಿ ನಿರ್ಮಾಣಗೊಳ್ಳಲು ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ನಂತರ ಮಾತನಾಡಿದ ಅವರು, ನೂತನ ಮಾರ್ಗದಲ್ಲಿ ಪ್ರಯಾಣಿಕರ ರೈಲಿನ ಶೀಘ್ರ ಸಂಚಾರಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ನೈರುತ್ಯ ರೈಲ್ವೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ಮುದಗೌಡರ, ಪ್ರಾಯೋಗಿಕ ಪರೀಕ್ಷೆ ಸೇರಿದಂತೆ ಎಲ್ಲ ಕೆಲಸಗಳೂ ಪೂರ್ಣಗೊಂಡಿದ್ದು ರೈಲ್ವೆ ಸಂಚಾರಕ್ಕೆ ಚಾಲನೆ ನೀಡುವ ದಿನವನ್ನು ಇಲಾಖೆ ನಿರ್ಧರಿಸಲಿದೆ ಎಂದರು.

ಕಾಂಗ್ರೆಸ್‌ ಮುಖಂಡ ದೊಡ್ಡಬಸವನಗೌಡ ಬಯ್ಯಾಪುರ, ಮಹಾಂತೇಶ ಅಗಸಿಮುಂದಿನ, ಉಮೇಶ ಮಂಗಳೂರು, ದೊಡ್ಡಪ್ಪ ಗೋನಾಳ, ಹೊರಪ್ಯಾಟಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.