ADVERTISEMENT

ಕನ್ನಡ ನಾಡು-ನುಡಿ ಚಿಂತನೆ ಕುರಿತು ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 6:01 IST
Last Updated 27 ನವೆಂಬರ್ 2025, 6:01 IST
ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕೊಪ್ಪಳದ ಚಕೋರ ಸಾಹಿತ್ಯ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿ ಚಿಂತನೆ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು
ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕೊಪ್ಪಳದ ಚಕೋರ ಸಾಹಿತ್ಯ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿ ಚಿಂತನೆ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು   

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕೊಪ್ಪಳದ ಚಕೋರ ಸಾಹಿತ್ಯ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿ ಚಿಂತನೆ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು.

ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯ ಅಜಮೀರ ನಂದಾಪುರ ಮಾತನಾಡಿ, ಕನ್ನಡ ಭಾಷೆಯ ಶ್ರೇಷ್ಠತೆ ಮೆರೆದ ಕವಿ ಕುವೆಂಪು, ಹಂಪ ನಾಗರಾಜಯ್ಯ, ಚಂದ್ರಶೇಖರ ಕಂಬಾರ, ಚೆನ್ನವೀರ ಕಣವಿ ಸೇರಿ ಇತರೆ ಲೇಖಕರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಿ.ಎಂ.ಎನ್ ಕಾಲೇಜಿನ ಉಪನ್ಯಾಸಕ ಹನುಮಂತಪ್ಪ ಚಂದಲಾಪುರ ಅವರು ಕನ್ನಡನಾಡು ನುಡಿಯ ಚಿಂತನೆ ಕುರಿತು ವಿಷಯ ಮಂಡಿಸಿದರು.

ADVERTISEMENT

ಕಾಲೇಜಿನ ಪ್ರಾಂಶುಪಾಲ ಪ್ರೊ.ಕರಿಗೂಳಿ ಅವರು ಜಿ.ಪಿ ರಾಜರತ್ನಂ ಅವರ ರತ್ನನ್ ಪದಗಳನ್ನು ಉಲ್ಲೇಖಿಸಿ ಕನ್ನಡ ಭಾಷೆ ಮಹತ್ವದ ಕುರಿತು ತಿಳಿಸಿ, ರನ್ನನ ಗದಾಯುದ್ಧದ ಪ್ರಸಂಗದ ಮೂಲಕ ಹಳಗನ್ನಡದ ಭಾಷಾ ವೈಶಿಷ್ಟ್ಯ ಉಲ್ಲೇಖಿಸಿ ಕನ್ನಡ ಭಾಷೆ ಸೊಗಡನ್ನು ವಿವರಿದರು.

ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಕಾಲೇಜಿನ ಸಹ ಪ್ರಾಧ್ಯಾಪಕ ಸರಫರಾಜ್ ಅಹಮದ್ ಮಾತನಾಡಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು.

ಅಧ್ಯಾಪಕ ವಿರುಪಾಕ್ಷ.ಕೆ, ಸಹಾಯಕ ಪ್ರಾಧ್ಯಾಪಕ ಶಶಿಕುಮಾರ, ಶಂಕ್ರಪ್ಪ ಎಂ., ರವಿಕುಮಾರ, ಉಪನ್ಯಾಸಕ ಈಶಪ್ಪ ಮೇಟಿ, ರಾಧ, ಜಬೀನಾ ಬೇಗಂ, ವಿನಾಯಕ, ಶಾಂತಿ, ಚಿನ್ನವರಪ್ರಸಾದ, ಶರಣಬಸವ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.