ಗಂಗಾವತಿ: ತಾಲ್ಲೂಕಿನ ಗಡ್ಡಿ ಗ್ರಾಮದ ಆಗೋಲಿ ರಸ್ತೆಯ ಕುಂಬಾರ ಮುದುಕಪ್ಪ ಜಮೀನಿನಲ್ಲಿ ರಮೇಶ ಎಂಬುವವರಿಗೆ ಸೇರಿದ ನಾಲ್ಕು ಹಸು, ಒಂದು ಕರುವನ್ನು ಭಾನುವಾರ ಕಳವು ಮಾಡಲಾಗಿದೆ.
ರಮೇಶ ಅವರು ಸಂಜೆ ಜಮೀನಿನಲ್ಲಿ ಹಸುಗಳನ್ನು ಕಟ್ಟಿಹಾಕಿ, ಮನೆಗೆ ಹೋಗಿದ್ದರು. ಸೋಮವಾರ ಬೆಳಿಗ್ಗೆ ಜಮೀನಿಗೆ ಬಂದು ನೋಡಿದಾಗ, ಜಾನುವಾರು ಇರಲಿಲ್ಲ. ಅಂದಾಜು ₹2.5 ಲಕ್ಷ ಮೌಲ್ಯದ ನಾಲ್ಕು ಹಸುಗಳಿದ್ದವು. ಭಾನುವಾರ ರಾತ್ರಿ ದುಷ್ಕರ್ಮಿಗಳು ಅಶೋಕ ಲೈಲಾಂಡ್‌ನಲ್ಲಿ ಕಳವು ಮಾಡಿಕೊಂಡು ಪರಾರಿಯಾಗಿರುವ ಬಗ್ಗೆ ಸ್ಥಳೀಯರಿಂದ ಸಂಶಯ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಚೆಗೆ ಇದೇ ಗ್ರಾಮದಲ್ಲಿ ಸುರೇಶ ಎಂಬುವವರಿಗೆ ಸೇರಿದ 9 ಕುರಿಗಳು ಕಳವಾಗಿದ್ದವು. ಈ ಭಾಗದಲ್ಲಿ ಹಸು, ಕುರಿಗಳ ಕಳ್ಳತನ ನಿರಂತರವಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.