ADVERTISEMENT

ಗೌರಿ–ಗಣೇಶನ ಅದ್ದೂರಿ ಸ್ವಾಗತಕ್ಕೆ ಗಂಗಾವತಿ ಸಜ್ಜು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 4:40 IST
Last Updated 27 ಆಗಸ್ಟ್ 2025, 4:40 IST
ಗಂಗಾವತಿ ಗಾಂಧಿವೃತ್ತದಲ್ಲಿ‌ ಮಹಿಳೆಯರು ಗಣೇಶ ಮೂ ರ್ತಿ ಖರೀದಿಸುತ್ತಿರುವುದು.
ಗಂಗಾವತಿ ಗಾಂಧಿವೃತ್ತದಲ್ಲಿ‌ ಮಹಿಳೆಯರು ಗಣೇಶ ಮೂ ರ್ತಿ ಖರೀದಿಸುತ್ತಿರುವುದು.   

ಗಂಗಾವತಿ: ತಾಲ್ಲೂಕಿನಲ್ಲಿ ಗೌರಿ-ಗಣೇಶ ಹಬ್ಬವನ್ನು ಸಂಭ್ರ ಮದಿಂದ ಆಚರಿಸಲು ಜನರು ತಯಾರಿಸಿಕೊಂಡಿದ್ದು, ಮಂ ಗಳವಾರ ಗಂಗಾವತಿ ನಗರದ ಗಾಂಧಿ, ಮಹಾವೀರ ವೃತ್ತದ ಲ್ಲಿ ಅಲಂಕಾರಿಕ ವಸ್ತು, ಪೂಜಾ ಸಾಮಗ್ರಿ, ಹೂ, ಹಣ್ಣುಗಳ ಮಾರಾಟ,ಖರೀದಿ ಭರಾಟೆ ಜೋರಾಗಿಯೇ ನಡೆಯಿತು.

ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಬುಧವಾರ ಎಲ್ಲೆಡೆ ಗೌರಿ ಹಬ್ಬ ಆಚರಿಸಲಾಗುತ್ತಿದೆ. ಇದರ ಭಾಗವಾಗಿ ಗಂಗಾವತಿ ನಗರದ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿಗೆ ಜನರು ಅಷ್ಟೊಂದು ಏನೂ ಬಂದಿರಲಿಲ್ಲ. ಸಂಜೆ ವೇಳೆ ಜನರು ಪ್ರ ಮುಖ ವೃತ್ತಗಳಲ್ಲಿನ ಮಾರುಕಟ್ಟೆಗಳಿಗೆ ಆಗಮಿಸಿದರು.

ಹಬ್ಬದ ನಿಮಿತ್ತ ಮನೆ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪ ನೆಯ ಮಂಟಪ ಅಲಂಕರಿಸಲು ಅಗತ್ಯವಾದ ಹೂವು, ವಿ ದ್ಯುತ್ ಅಲಂಕಾರಿಕ ವಸ್ತು, ಹಣ್ಣು, ಬಾಳೆದಿಂಡು ಸೇರಿ ಗ ಣೇಶ ಮೂರ್ತಿಗಳನ್ನು ಖರೀದಿಸಿದರು.

ADVERTISEMENT

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ:ಶ್ರಾವಣ ಮಾಸ ಆರಂಭದಿಂದ ಸಾಲು, ಸಾಲು ಹಬ್ಬಗಳು ಬಂದಿದ್ದು, ಈ ಬಾರಿ ಗ್ರಾಹಕರಿಗೆ ತುಸು ಬೆಲೆ ಏರಿಕೆ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿ, ಹೂ, ಹಣ್ಣು, ಅಲಂಕಾರಿಕ ವಸ್ತುಗಳು ಸೇರಿ ಪೂ ಜಾ ಸಾಮಗ್ರಿಗಳ ಬೆಲೆಗಳು ಹೆಚ್ಚೆ ಇದ್ದವು.ಇದರಿಂದ ಕೆಲ ಗ್ರಾಹಕರು ವಸ್ತುಗಳ ಖರೀದಿಗೆ ಹಿಂದೆ-ಮುಂದೆ ಮಾಡಿದ ಸಂದರ್ಭಗಳು ಕಂಡು ಬಂದವು.

ಇನ್ನೂ ಗಣೇಶ ಚತುರ್ಥಿ ಅಂಗವಾಗಿ ರೈತರು, ನಾಲ್ಕುಕಾಸು ಮಾಡಿಕೊಳ್ಳಬೇಕೆಂದು ಮಾವಿನ ಎಲೆ, ಬಾಳೆದಿಂಡು, ಕ ಬ್ಬು, ಗರಿಕೆ (ಹುಲ್ಲು), ಎಕ್ಕೆಹೂ ತಂದು ಗುಂಡಮ್ಮ ಕ್ಯಾಂಪ್ ರಸ್ತೆ, ಗಾಂಧಿವೃತ್ತ, ಮಹಾವೀರ ವೃತ್ತ, ಕೊಪ್ಪಳ ರಸ್ತೆ ಭಾಗ ದಲ್ಲಿಟ್ಟು ಮಾರಾಟ ನಡೆಸಿದರು.

ವಸ್ತುಗಳ ಬೆಲೆ ಎಷ್ಟೆಷ್ಟು:ಗಣೇಶ ಹಬ್ಬದ ನಿಮಿತ್ತ ಬಾಳೆ ದಿಂ ಡು ಜೋಡಿ ₹20-₹30, ಮಾವಿನ ಎಲೆ ₹20-₹30, ಕಬ್ಬು ಜೋಡಿ ₹20, ಗರಿಕೆ (ಹುಲ್ಲು) ಕಟ್ಟು ಒಂದಕ್ಕೆ ₹10 ಎಕ್ಕೆಹೂ ₹20 ಹಣಕ್ಕೆ ಮಾರಾಟ ಮಾಡಲಾಗುತ್ತಿದೆ.

ಇನ್ನೂ ಆ್ಯಪಲ್ ಕೆಜಿಗೆ ₹120-₹150, ಆರೆಂಜ್ ₹180,
ದಾಳಿಂಬೆ ₹150-₹200, ಸೀತಾಫಲ ₹100,ಸಪೋಟ ₹10 0,ಬಾಳೆಹಣ್ಣು ₹60-₹80,ದ್ರಾಕ್ಷಿ ₹200, ಪೇರಳೆ ₹60-₹80, ಮೊಸಂಬಿ ₹130, ಬೆಳದಕಾಯಿ ₹100,ಮೆಕ್ಕೆಜೋಳ ತೆನೆ ಒಂದಕ್ಕೆ ₹15, ಬೂದು ಕುಂಭಳಕಾಯಿ ₹120,ಬಾಳೆಗೊನೆ ₹150-₹200 ಹಣಕ್ಕೆ ಮಾರಾಟ‌‌ ಮಾಡಲಾಗುತ್ತಿದೆ.

ಗಣೇಶನ ಮೂರ್ತಿನ ಬಳಿ ಅಲಂಕಾರಕ್ಕೆ ಪೇರಳೆ ತೋರಣ ಜೋಡಿ ₹30, ಬಿತ್ಪತ್ರಿ ಜೋಡಿ ₹30, ಸೀತಾಫಲ ಜೋಡಿ ₹30,ಬೆಳದಕಾಯಿ ಜೋಡಿ ₹30ಕ್ಕೆ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ.

ಇಳಿದ ಹೂವಿನ ಬೆಲೆ: ಶ್ರಾವಣ ಮಾಸದ ಆರಂಭದಿಂದ ಈ ವರೆಗೆ ಗಣೇಶ ಚತುರ್ಥಿವರೆಗೆ ಹೂವಿನ ಬೆಲೆ ಇಳಿಕೆಯೇ ಕಂಡಿಲ್ಲ.ಇದರಿಂದ ಗ್ರಾಹಕರಿಗೆ ಹೂವಿನ ಖರೀದಿಗೆ ಹಿಂ ದೇ ಟೂ ಹಾಕುತ್ತಿದ್ದಾರೆ ಎನ್ನುತ್ತಾರೆ ಹೂವಿನ ವ್ಯಾಪಾರಸ್ಥರು. ಇ ದರ ನಡುವೆಯೂ ಗುಲಾಬಿ ಕೆಜಿಗೆ ₹400,ಸೇವಂತಿಗೆ ₹ 70 0,ಮಲ್ಲಿಗೆ ₹800,ಚೆಂಡೂ ಹೂ ₹100,ದುಂಡು ಮಲ್ಲಿಗೆ ₹ 1200 ಬೆಲೆಯಿದೆ. ಇನ್ನೂ ₹150-₹10ಸಾವಿರವರೆಗೆ ಹೂವಿ ನ ಹಾರಗಳು ಮಾರಾಟಕ್ಕಿದ್ದವು.

ಈ ಬಾರಿ ಗಣೇಶ ಮೂರ್ತಿಗಳ ಬೆಲೆ ತುಸು ಏರಿಕೆಯಿದ್ದು, ಭಕ್ತರು ಖರೀದಿಗೆ ಯೋಚನೆ ಮಾಡುತ್ತಿದ್ದಾರೆ. ಕಡಿಮೆ ಬೆಲೆ ಗೆ ಮೂರ್ತಿ ನೀಡುವಂತೆ ವ್ಯಾಪಾರಸ್ಥರನ್ನ ಕೇಳುತ್ತಿದ್ದಾರೆ. ಮೂರ್ತಿ ತಯಾರಿಕೆಯಿಂದ ಹಿಡಿದೂ, ಎಲ್ಲವು ಬೆಲೆ ಏರಿಕೆ ಕಂಡಿವೆ. ಕಳೆದ ಬಾರಿಯಷ್ಟು ವ್ಯಾಪಾರ, ಈ ವರ್ಷವಿಲ್ಲ.

ಸ್ಪೂರ್ತಿ ಎ ಚೌಹಾನ್, ಗಾಂಧಿವೃತ್ತ ಗಣೇಶ ಮೂರ್ತಿಗಳ ವ್ಯಾಪಾರಿ

ಹೂವಿನ ಬೆಲೆ ನಿರಂತರವಾಗಿ ಏರಿಕೆಯಲ್ಲಿದ್ದು, ಗ್ರಾಹಕರು ಹೂವು ಖರೀದಿಗೆ ಮುಂದಾಗುತ್ತಿಲ್ಲ. ವ್ಯಾಪಾರವು ಇಲ್ಲ‌. ನಾ ಳೆಯವರೆಗೆ ಕಾದೂ ನೋಡಬೇಕಾಗಿದೆ.

ಶಂಕರ್ ಹುಗಾರ , ಹೂವಿನ ವ್ಯಾಪಾರಿ, ಗಾಂಧಿ ವೃತ್ತ

ಗಂಗಾವತಿ ಗಾಂಧಿವೃತ್ತದಲ್ಲಿ‌ ಸಾರ್ವಜನಿಕರು ಗಣೇಶ ಮೂ ರ್ತಿ ಖರೀದಿಸಲು ವೀಕ್ಷಣೆ ಮಾಡುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.