ಗಂಗಾವತಿ: ಗ್ರಾಮೀಣ ಭಾಗದ ಜನರು ಸ್ಥಳೀಯವಾಗಿಯೇ ಕೂಲಿ ಕೆಲಸ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದ್ದು, ಎಲ್ಲರೂ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಗಡ್ಡಿಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ವಡ್ಡರಹಟ್ಟಿ ಮತ್ತು ಆಗೋಲಿ ಗ್ರಾಮ ಪಂಚಾಯಿತಿ ಕೂಲಿಕಾರರಿಗಾಗಿ ಸೋಮವಾರ ಆಯೋಜಿಸಿದ್ದ ದುಡಿಯೋಣ ಬಾ ಮತ್ತು ಸ್ತ್ರೀ ಚೇತನ ಅಭಿಯಾನದಲ್ಲಿ ಮಾತನಾಡಿದರು.
ನರೇಗಾ ಯೋಜನೆಯಡಿ ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ಅಭಿಯಾನ ಶುರುವಾಗಿದ್ದು, ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ನೀಡಲಾಗುತ್ತಿದೆ. ಕೂಲಿಕಾರರು ಅರ್ಜಿ ಸಲ್ಲಿಸಿ ಸಾಮೂಹಿಕ ಕೆಲಸ ಪಡೆಯಬೇಕು. ಅಭಿಯಾನದಡಿ ನರೇಗಾ ಯೋಜನೆಯಿಂದ ಹೊರಗಿರುವ ಅರ್ಹ ಮತ್ತು ದುರ್ಬಲ ವರ್ಗಗಳ ಕುಟುಂಬಗಳ ಗುರುತಿಸುವಿಕೆಯ ಉದ್ದೇಶವಾಗಿದೆ ಎಂದರು
ವಡ್ಡರಹಟ್ಟಿ ಪಿಡಿಓ ಸುರೇಶ ಚಲವಾದಿ ಮಾತನಾಡಿ, ಕೂಲಿಕಾರರ ಕೆಲಸದ ಪ್ರಮಾಣದ ಮೇಲೆ ಕೂಲಿ ನಿಗದಿಯಾಗುತ್ತದೆ. ಎಲ್ಲರೂ ಸರಿಯಾಗಿ ಕೆಲಸ ಮಾಡಬೇಕು. ಇದರಿಂದ ಕೆರೆಗಳ ಅಭಿವೃದ್ಧಿ ಆಗುತ್ತವೆ ಎಂದರು.
ಐಇಸಿ ಸಂ ಯೋಜಕ ಬಾಳಪ್ಪ ತಾಳಕೇರಿ ನರೇಗಾ ಯೋಜನೆ ಕುರಿತು ಮಾಹಿತಿ ನೀಡಿದರು. ಆಗೋಲಿ ಗ್ರಾ.ಪಂ ಅಧ್ಯಕ್ಷ ಅಮಾಜಪ್ಪ, ಪಿಡಿಒ ಕಾಶೀನಾಥ ಹಂಚಿನಾಳ, ವಡ್ಡರಹಟ್ಟಿ ಗ್ರಾ.ಪಂ ಸದಸ್ಯ ಭರತ ಕುಮಾರ, ಮೇರಾಜ್ ದಳಪತಿ, ಹೊನ್ನುರಬೀ, ನರೇಗಾ ತಾಂತ್ರಿಕ ಸಹಾಯಕ ಕೊಟ್ರೇಶ ಜವಳಿ, ಉದಯಕುಮಾರ, ಶರಣಯ್ಯ, ಗಾದಿಲಿಂಗಪ್ಪ, ಗ್ರಾ.ಪಂ ಸಿಬ್ಬಂದಿ, ಬಿಎಫ್‌ಟಿಗಳು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.