ಕುಕನೂರು: ‘ಲಾಕ್‌ಡೌನ್ ಕಾರಣ ಸಂಕಷ್ಟದಲ್ಲಿ ಜನಕ್ಕೆ ಸಹಾಯ ಮಾಡಲು ಸ್ಥಿತಿವಂತರು ಮುಂದೆ ಬರಬೇಕು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಂಭು ಜೋಳದ ಅವರು ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರಕಾರ್ಮಿಕರಿಗೆ ಮಂಗಳವಾರ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದರು.
ಶಾಸಕ ಹಾಲಪ್ಪ ಆಚಾರ ಅವರು ಕೋವಿಡ್ ವಾರಿಯರ್‌ಗಳಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ. ಪೌರ ಕಾರ್ಮಿಕರು ಕೋವಿಡ್ ಕುರಿತು ಜಾಗೃತಿ ವಹಿಸಬೇಕು ಎಂದು ಅವರು ಈ ವೇಳೆ ಹೇಳಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಂದ್ರ ಬಾಗಲಕೋಟೆ, ಅರುಣ ನಾಯ್ಕರ್, ಬಸವರಾಜ ಅಡವಿ ಹಾಗೂ ಮಾಹತೇಂಶ ಜಂಗ್ಲಿ ಸೇರಿ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.