ಹೆಬ್ರಿ: ಜಗತ್ತಿನ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿರುವ ಲಯನ್ಸ್‌ನಿಂದ ಬಾಂಧವ್ಯ ವೃದ್ಧಿಯಾಗುತ್ತದೆ. ಜನ ಸೇವೆಯಿಂದ ಸಂಬಂಧ ಬೆಳೆಯುತ್ತದೆ. ಸರ್ವರ ಸೇವೆಗೆ ಲಯನ್ಸ್ ಅತ್ಯುತ್ತಮ ಸಂಸ್ಥೆ ಎಂದು ಲಯನ್ಸ್ ಪ್ರಾಂತೀಯ ಪ್ರಥಮ ಮಹಿಳೆ ಸುಜಾತ ಹರೀಶ್ ಪೂಜಾರಿ ಹೇಳಿದರು.
ಅವರು ಭಾನುವಾರ ಹೆಬ್ರಿ ಕುಚ್ಚೂರು ರಸ್ತೆಯ ಪರಿಮಳ ಲೇಔಟ್‌ನಲ್ಲಿ ಬೇಳಂಜೆ ಜಗನ್ನಾಥ ಪೂಜಾರಿ ವೇದಿಕೆಯಲ್ಲಿ ಲಯನ್ಸ್ ಜಿಲ್ಲೆ 317 ಸಿ ಪ್ರಾಂತ್ಯ 4ರ ಪ್ರಾಂತೀಯ ಸಮ್ಮೇಳನ ‘ಪರಿಮಳ’ವನ್ನು ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನಾಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ ಮಾತನಾಡಿ, ಪ್ರಾಮಾಣಿಕತೆ, ನಿಷ್ಠೆಯಿಂದ ಸೇವೆ ಮಾಡಿದರೆ ಉನ್ನತಿ ಪಡೆಯಲು ಸಾಧ್ಯ ಎಂದರು. ಪ್ರಾಂತೀಯ ಸಮ್ಮೇಳನ ಯಶಸ್ವಿಗೊಳಿಸಿದ ಸಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮೂಡುಬಿದಿರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಯೋಗೀಶ್ ಕೈರೋಡಿ ಮಾತನಾಡಿ, ಜನಸೇವೆ ಮಾಡುವ ಮೂಲಕ ನಾವು ಜೀವನದಲ್ಲಿ ಸಾರ್ಥಕತೆ ಪಡೆಯಬೇಕು. ಲಯನ್ಸ್ ಸಂಸ್ಥೆಯು ಅನುಭವ ಜೀವನ ಅನುಭವ ನೀಡುತ್ತದೆ ಎಂದರು.
ಸಮ್ಮೇಳನ ಸಮಿತಿ, ಆತಿಥೇಯ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಲಯನ್ಸ್ ಪ್ರಮುಖರು, ಸಮಾಜ ಸೇವಕ ಛಾಯಾಗ್ರಾಹಕ ದಿವಾಕರ ಶೆಟ್ಟಿ ಕುಚ್ಚೂರು, ಪ್ರಗತಿಪರ ಕೃಷಿಕೆ ಸೀತಾನದಿ ವಸಂತಿ ಶೆಟ್ಟಿ, ನಿವೃತ್ತ ದಂತ ತಂತ್ರಜ್ಞ ಶರತ್ ಕುಮಾರ್ ಹೆಗ್ಡೆ ಸಹಿತ ಹಲವರಿಗೆ ಸನ್ಮಾನ ಮಾಡಲಾಯಿತು. ಬಡ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಧನಸಹಾಯ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೊಡುಗೆ, ಆರೋಗ್ಯ ಸಹಾಯಧನ ವಿತರಣೆ ನಡೆಯಿತು.
ಆಕರ್ಷಕ ಬ್ಯಾನರ್ ಪ್ರದರ್ಶನದಲ್ಲಿ ಹಿರಿಯಡ್ಕ ಲಯನ್ಸ್ ಕ್ಲಬ್ ಪ್ರಥಮ, ಬೆಳ್ಮಣ್ ಮತ್ತು ಬೆಳ್ಮಣ್ ಸೆಂಚುರಿ ಲಯನ್ಸ್ ಕ್ಲಬ್ ದ್ವಿತೀಯ, ಪೇತ್ರಿ ಲಯನ್ಸ್ ಕ್ಲಬ್ ತೃತೀಯ ಪ್ರಶಸ್ತಿ ಪಡೆದವು. ಪೂರ್ಣ ಹಾಜರಾತಿಯಲ್ಲಿ ಹಿರಿಯಡ್ಕ ಲಯನ್ಸ್ ಪ್ರಥಮ, ಅಜೆಕಾರು ಲಯನ್ಸ್ ಕ್ಲಬ್ ದ್ವಿತೀಯ ಪ್ರಶಸ್ತಿ ಪಡೆದವು.
ನಿವೃತ್ತ ಯೋಧ ಪ್ರಸನ್ನ ಸೋಮೇಶ್ವರ ಅವರು ಚಾರ ನವೋದಯ ವಿದ್ಯಾಲಯದ ಎನ್‌ಸಿಸಿ ಕೆಡೆಟ್‍ಗಳ ಜತೆಗೂಡಿ ತಂದ ರಾಷ್ಟ್ರಧ್ವಜಕ್ಕೆ ಹೆಬ್ರಿ ಲಯನ್ಸ್ ಕ್ಲಬ್ ಸಂಸ್ಥಾಪಕ ದಿನಕರ ಪ್ರಭು ಧ್ವಜ ವಂದನೆ ಸಲ್ಲಿಸಿದರು.
ಮುಂಬೈಯ ಉದ್ಯಮಿ ಪ್ರಸಾದ್ ಪಿ. ಶೆಟ್ಟಿ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್. ಸುಬ್ರಹ್ಮಣ್ಯ, ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ಪ್ರಾಂತ್ಯ ಸಲಹೆಗಾರ ಎನ್.ಎಂ.ಹೆಗ್ಡೆ, ಎಲ್‌ಸಿಐಎಫ್ ಮುಖ್ಯ ಸಂಯೋಜಕ ಹರಿಪ್ರಸಾದ್ ರೈ, ಪ್ರಾಂತೀಯ ಕಾರ್ಯದರ್ಶಿ ಥೋಮಸ್ ಲುಕೋಸ್, ಸಂಪುಟ ಕಾರ್ಯದರ್ಶಿ ಗಿರೀಶ್ ರಾವ್, ವಲಯಾಧ್ಯಕ್ಷರಾದ ಪ್ರಕಾಶ ಶೆಟ್ಟಿ, ರಘುರಾಮ ಶೆಟ್ಟಿ, ಶಾಕೀರ್ ಹುಸೇನ್, ವಿವಿಧ ಪ್ರಾಂತ್ಯಗಳ ಅಧ್ಯಕ್ಷರು, ಮುಖಂಡರು, ಸಮ್ಮೇಳನ ಸಮಿತಿ ಅಧ್ಯಕ್ಷ ವಾದಿರಾಜ ಶೆಟ್ಟಿ, ಗೌರವಾಧ್ಯಕ್ಷ ಟಿ.ಜಿ. ಆಚಾರ್ಯ, ಮುಖ್ಯ ಸಲಹೆಗಾರ್ತಿ ಡಾ.ಭಾರ್ಗವಿ ಆರ್. ಐತಾಳ್, ಎಚ್. ದಿನಕರ ಪ್ರಭು, ಕಾರ್ಯದರ್ಶಿ ಕೆ. ಕೃಷ್ಣ ಶೆಟ್ಟಿ, ಖಜಾಂಚಿ ರವೀಂದ್ರನಾಥ ಶೆಟ್ಟಿ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾನದಿ ನಾಗೇಶ ನಾಯಕ್, ಕಾರ್ಯದರ್ಶಿ ನಾಡ್ಪಾಲು ಹರೀಶ ಶೆಟ್ಟಿ, ಕೋಶಾಧಿಕಾರಿ ಆಶಾ ಬಿ. ಶೆಟ್ಟಿ, ಲಿಯೊ ಅಧ್ಯಕ್ಷ ದರ್ಶನ್ ಶೆಟ್ಟಿ, ಆತಿಥೇಯ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
ನೀರೆಬೈಲೂರು ಉದಯ ಕುಮಾರ್ ಹೆಗ್ಡೆ ಪ್ರಾಂತೀಯ ಅಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ಹೆಬ್ರಿ ಸಿಟಿ ಲಯನ್ಸ್ ಕ್ಲಬ್‌ನ ಸ್ನೇಹಲತಾ ಟಿ.ಜಿ, ಸಂಪನ್ಮೂಲ ವ್ಯಕ್ತಿ ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿದರು. ವಾದಿರಾಜ ಶೆಟ್ಟಿ ಸ್ವಾಗತಿಸಿದರು. ವಕೀಲ ಕೃಷ್ಣ ಶೆಟ್ಟಿ ವಂದಿಸಿದರು. ಮುನಿಯಾಲು ಶಂಕರ ಶೆಟ್ಟಿ ನಿರ್ಣಯ ಮಂಡಿಸಿದರು. ರಾಮಚಂದ್ರ ಭಟ್ ನೋಂದಣಿ ವರದಿ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.