ADVERTISEMENT

ಹುಲಿಹೈದರ: ಸತ್ಯ ಶೋಧನಾ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 4:59 IST
Last Updated 3 ಸೆಪ್ಟೆಂಬರ್ 2022, 4:59 IST
ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮಕ್ಕೆ ಶುಕ್ರವಾರ ಸತ್ಯ ಶೋಧನಾ ತಂಡದ ಸದಸ್ಯರು ಭೇಟಿ ನೀಡಿದರು
ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮಕ್ಕೆ ಶುಕ್ರವಾರ ಸತ್ಯ ಶೋಧನಾ ತಂಡದ ಸದಸ್ಯರು ಭೇಟಿ ನೀಡಿದರು   
ಕನಕಗಿರಿ: ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಈಚೆಗೆ ನಡೆದ ಗುಂಪು ಘರ್ಷಣೆಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಮನೆಗೆ ಶುಕ್ರವಾರ ಸತ್ಯ ಶೋಧನಾ ತಂಡದ ಸದಸ್ಯರು ಭೇಟಿ ನೀಡಿ ಸಾಂತ್ವನ ಹೇಳಿದರು.
ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಸಭೆ ನಡೆಸಬೇಕು. ಎಲ್ಲರೂ ಮೊದಲಿನಂತೆ ಬದುಕುವ ಹಾಗೆ ಆಗಬೇಕು. ಮೃತ ವ್ಯಕ್ತಿಯ ಪ್ರತಿ ಕುಟುಂಬಕ್ಕೆ ತಕ್ಷಣ ₹50 ಲಕ್ಷ ಹಾಗೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಧರ್ಮಣ್ಣ ಅವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರಕರಣದ ಕುರಿದಂತೆ ನಿಜಾಂಶವನ್ನು ಲಿಖಿತ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಸದಸ್ಯರಾದ ಅರವಿಂದ ನಾರಾಯಣ, ಮಹಮ್ಮದ್ ಆಫೀಪ್‌, ಮಹಾಂತೇಶ ಕೊತಬಾಳ, ಜೆ. ಭಾರಧ್ವಾಜ್, ಬಸವರಾಜ ಶೀಲವಂತರ, ಕ್ಲಿಫ್ಟನ್, ಕರಿಯಪ್ಪ ಗುಡಿಮನಿ, ಡಿ.ಎಲ್. ಪೂಜಾರ, ಆನಂದ ಭಂಡಾರಿ, ಕನಕಪ್ಪ ದೊಡ್ಡಮನಿ, ಕೆಂಚಪ್ಪ, ಲೋಕೇಶ, ಪಂಪಾಪತಿ, ಪಾಮಣ್ಣ ಅರಳಿಗನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.