ADVERTISEMENT

ವಿಮೋಚನಾ ಹೋರಾಟದಲ್ಲಿ ರಕ್ತಸಿಕ್ತ ಚರಿತ್ರೆ: ಶರಣಪ್ಪ ಉಮಚಗಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:39 IST
Last Updated 18 ಸೆಪ್ಟೆಂಬರ್ 2025, 5:39 IST
ಕುಕನೂರಿನ ತಹಶೀಲ್ದಾರ್ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿತು
ಕುಕನೂರಿನ ತಹಶೀಲ್ದಾರ್ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿತು   

ಕುಕನೂರು: ‘ನಿಜಾಮನ ಆಳ್ವಿಕೆ ವಿರುದ್ಧ ಸ್ವಾಮಿ ರಮಾನಂದ ತೀರ್ಥರಂತಹ ನಾಯಕರ ನೇತೃತ್ವದಲ್ಲಿ ವಿಮೋಚನಾ ಹೋರಾಟಗಳಲ್ಲಿ ರಕ್ತಸಿಕ್ತ ಚರಿತ್ರೆ ನಡೆದು ಇತಿಹಾಸ ಪುಟ ಸೇರಿವೆ’ ಎಂದು ಉಪನ್ಯಾಸಕ ಶರಣಪ್ಪ ಉಮಚಗಿ ಹೇಳಿದರು.

ಇಲ್ಲಿನ ತಹಶೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ನಡೆದ 78ನೇ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಹಶೀಲ್ದಾರ್‌ಎಚ್‌.ಪ್ರಾಣೇಶ್, ತಾಲ್ಲೂಕು ಪಂಚಾಯಿತಿ ಯೋಜನಾ ಅಧಿಕಾರಿ ಆನಂದಕುಮಾರ್, ಗ್ರೇಡ್‌- 2 ತಹಶೀಲ್ದಾರ್‌ ಮುರಳಿಧರರಾವ್ ಕುಲಕರ್ಣಿ, ಎ.ಎಚ್‌.ಮುತ್ತಣ್ಣ, ಅಶೋಕ ಪತ್ತಾರ, ಮೋಹನಕುಮಾರ, ಪ್ರಾಚಾರ್ಯ ಅರುಣಕುಮಾರ, ಸಿಆರ್‌ಪಿ ಪೀರ್‌ಸಾಬ್‌ ದಫೇದಾರ್‌ ಇದ್ದರು.

ADVERTISEMENT

ಕಲ್ಯಾಣ ಕರ್ನಾಟಕ ಉತ್ಸವದ ಕುರಿತು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಾದ ಮೇಘಾ ಭೀಮನಕಟ್ಟಿ, ಪಲ್ಲವಿ ಆರೆರ್ ಭಾಷಣ ಮಾಡಿದರು. ವಿವಿಧ ಶಾಲಾ ಮಕ್ಕಳಿಂದ ದೇಶಭಕ್ತಿ ಕುರಿತು ಸಾಂಸ್ಕೃತಿಕ ನೃತ್ಯ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.