ADVERTISEMENT

ಯಡ್ಡೋಣಿ: ಶಾಲಾ ಕೊಠಡಿಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 13:41 IST
Last Updated 25 ಜೂನ್ 2025, 13:41 IST
ಯಲಬುರ್ಗಾ ತಾಲ್ಲೂಕು ಯಡ್ಡೋಣಿ ಗ್ರಾಮದಲ್ಲಿ ಓಸಾಟ ಧರ್ಮದತ್ತಿ ಸಂಸ್ಥೆಯಿಂದ ನಿರ್ಮಾಣಗೊಂಡ ನಾಲ್ಕು ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು
ಯಲಬುರ್ಗಾ ತಾಲ್ಲೂಕು ಯಡ್ಡೋಣಿ ಗ್ರಾಮದಲ್ಲಿ ಓಸಾಟ ಧರ್ಮದತ್ತಿ ಸಂಸ್ಥೆಯಿಂದ ನಿರ್ಮಾಣಗೊಂಡ ನಾಲ್ಕು ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು   

ಯಲಬುರ್ಗಾ: ತಾಲ್ಲೂಕಿನ ಯಡ್ಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಓಸಾಟ ಧರ್ಮದತ್ತಿ ಸಂಸ್ಥೆ ಹಾಗೂ ಸ್ನೇಹ ಕೀರ್ತಿ ಅವರಿಂದ ಹೊಸ 4 ಕೊಠಡಿಗಳು ಮತ್ತು 2 ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿ ಉದ್ಘಾಟಿಸಲಾಯಿತು.

ಉದ್ಘಾಟಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ಧಲಿಂಗಪ್ಪ ಶ್ಯಾಗೋಟಿ, ‘ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗಳು ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡುವ ಮೂಲಕ ಶೈಕ್ಷಣಿಕ ಸುಧಾರಣೆ ಪ್ರೇರಣೆ ನೀಡಿದಂತಾಗಿದೆ. ಅಚ್ಚುಕಟ್ಟಾದ ಕಟ್ಟಡವಾಗಿರುವುದರಿಂದ ಈ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿ ಸಂಸ್ಥೆಗಳ ಪ್ರೋತ್ಸಾಹಕ್ಕೆ ಸಾರ್ಥಕಗೊಳಿಸಬೇಕಾಗಿದೆ, ಸಂಸ್ಥೆಯ ಸಾಮಾಜಿಕ ಕಾರ್ಯವು ಶ್ಲಾಘಿಸುವಂತಹದು’ ಎಂದರು.

ಓಸಾಟಾ ಸಂಸ್ಥೆಯ ಪ್ರತಿನಿಧಿ ಗೋಪಾಲಾಚಾರ್ಯ ಗ್ರಾಮದಲ್ಲಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿದ್ದು ಸಂತಸ ತಂದಿದೆ. ಇಲ್ಲಿಯ ಮಕ್ಕಳಿಗೆ ಅನುಕೂಲವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಗೊಂಡರೆ ಸಂಸ್ಥೆಯು ಹೆಮ್ಮೆಪಡುತ್ತದೆ ಎಂದರು.

ADVERTISEMENT

ಸಂಸ್ಥೆಯ ನಾರಾಯಣಸ್ವಾಮಿ, ಮಹೇಶ ಬಿ. ಮಾತನಾಡಿದರು. ಓಸಾಟಾ ಧರ್ಮದತ್ತಿ ಸಂಸ್ಥೆ ಬೆಂಗಳೂರಿನ ಪ್ರತಿನಿಧಿಗಳನ್ನು ಗ್ರಾಮ ಮತ್ತು ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯಮನೂರಸಾಬ್ ನದಾಫ್, ಬಸವರಾಜ ಮುಳಗುಂದ, ಸಂಗಯ್ಯ ಹಿರೇಮಠ, ಅಯ್ಯನಗೌಡ, ಮುಖ್ಯಶಿಕ್ಷಕಿ ಸವಿತಾ, ಫಕೀರಗೌಡ ಮಾಲಿಪಾಟೀಲ, ಸುರೇಶ, ಕೃಷ್ಣಾ ಪತ್ತಾರ ಸೇರಿ ಗ್ರಾಮ ಪಂಚಾಯಿತಿ ಸದಸ್ಯರು ಗಣ್ಯರು ಪಾಲ್ಗೊಂಡಿದ್ದರು. ರಮೇಶ ಆವೋಜಿ ನಿರೂಪಿಸಿದರು. ವಿರೂಪಾಕ್ಷಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.