ಕುಷ್ಟಗಿ: ದೇಶಕ್ಕೆ ಸದ್ಯ ಭ್ರಷ್ಟಾಚಾರದಿಂದ ಮುಕ್ತಿಹೊಂದುವ ಸ್ವಾತಂತ್ರ್ಯ ತುರ್ತು ಅಗತ್ಯವಾಗಿದೆ ಎಂದು ಸೇನೆಯ ನಿವೃತ್ತ ಕ್ಯಾಪ್ಟನ್ ಸೋಮಲಿಂಗ ತಿಲಗಂಜಿ ಹೇಳಿದರು.
ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪಟ್ಟಣದ ಎಸ್‌ವಿಸಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ನಾಗರಿಗರಿಗೆ ಸುರಕ್ಷತೆಯ ಭಾವನೆ ಬೆಳೆಯಬೇಕು, ಮತ್ತು ಜನರಲ್ಲಿ ಭ್ರಾತೃತ್ವ ಹೆಚ್ಚಿದರೆ ಸಶಕ್ತ ರಾಷ್ಟ್ರ ನಮ್ಮದಾಗಲು ಸಾಧ್ಯ ಎಂದರು.
ಇನ್ನೋರ್ವ ನಿವೃತ್ತ ಕ್ಯಾಪ್ಟನ್ ಮಲ್ಲಿಕಾರ್ಜುನ ಮಿರ್ಜಿ, ಶಿಕ್ಷಣ ಸಂಸ್ಥೆಯ ನಿರ್ದೇಶಕ ಲಿಂಗನಗೌಡ ಪಾಟೀಲ ಇತರರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಸವರಾಜ ಚಂದ್ರಶೇಖರ್, ಸಿಇಓ ಜಗದೀಶ್ ಅಂಗಡಿ, ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ಮಹದೇವ ಮಧಾಲೆ, ರಾಜ್ಯ ಪಠ್ಯಕ್ರಮ ಶಾಲೆಯ ಮುಖ್ಯೋಪಾಧ್ಯಾಯ ಭೀಮರಾವ್ ಕುಲಕರ್ಣಿ, ಪಿಯು ಕಾಲೇಜಿನ ಪ್ರಾಂಶುಪಾಲ ಭೀಮಸೇನ ಆಚಾರ ಹಾಗೂ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಎಸ್.ಸಿ.ತಿಪ್ಪಾಶೆಟ್ಟಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು.
ತಾಲ್ಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೀಳಗಿ ಗ್ರಾಮದ ಅಮೃತ ಸರೋವರ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನವ್ವ ಪೂಜಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ ಕಾರ್ಯಕ್ರಮದಲ್ಲಿ ಮಾತನಾಡಿದರು. ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶರಣಮ್ಮ ಕುರ್ನಾಳ, ಉಪಾಧ್ಯಕ್ಷೆ ಸಾವಿತ್ರಿ ಅಡೂರು, ಸದಸ್ಯರಾದ ಉಮೇಶ, ಶರಣಪ್ಪ, ಬಸಪ್ಪ ರಾಮಪ್ಪ, ಶಿವಪ್ಪ,ಬಸಮ್ಮ, ಮುತ್ತುರಾಜ ಇತರರು ಇದ್ದರು.
ಕುಷ್ಟಗಿಯ ಬುತ್ತಿಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರಧ್ವಜಾರೋಹಣವನ್ನು ಸಂಗಪ್ಪ ಕಡಿವಾಲ ನೆರವೇರಿಸಿದರು. ಶಿಕ್ಷಕರಾದ ಗುರುಲಿಂಗಯ್ಯ ಹಿರೇಮಠ, ಮುಖ್ಯಶಿಕ್ಷಕ ನಾಗರಾಜ ಪಟ್ಟಣಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ಪಟ್ಟಣಶೆಟ್ಟರ, ಗೌರವ ಅಧ್ಯಕ್ಷ ಮಹಾಂತಯ್ಯ ಹಿರೇಮಠ, ಉಪಾಧ್ಯಕ್ಷ ಬಸವನಗೌಡ ಮಾದಾಪೂರ, ನಿಂಗಪ್ಪ ಮಂಗಳೂರು, ಗುರುಮೂರ್ತೆಯ್ಯ ಹಿರೇಮಠ ,ಗೂಳಪ್ಪ ಶಿವಶೆಟ್ಟರ, ಮನೋಜ ಪಟ್ಟಣಶೆಟ್ಟರ ಹಾಗೂ ಶಿಕ್ಷಕರು, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.