
ಕಾರಟಗಿ: ‘ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಶ್ರಮದಿಂದ ಸಂವಿಧಾನ ರಚನೆಯಾಗಿದೆ. ಸಂವಿಧಾನ ಎಲ್ಲರಿಗೂ ಗೌರವದ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಿದೆ. ಶಿಕ್ಷಣ, ಅಭಿವೃದ್ಧಿ, ತಂತ್ರಜ್ಞಾನ ವಿಚಾರಗಳ ಕುರಿತು ಚರ್ಚೆ ನಡೆಯಬೇಕಿದೆ. ಅಂದಾಗಲೇ ದೇಶವು ಪ್ರಗತಿಪಥದತ್ತ ಸಾಗಿದಂತಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದ ಸಿದ್ಧೇಶ್ವರ ರಂಗಮಂದಿರದಲ್ಲಿ ಬುಧವಾರ ತಾಲ್ಲೂಕಾಡಳಿತದಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಈಚೆಗೆ ದೇಶದಲ್ಲಿ ಧರ್ಮ, ದೇವರು, ದೇವಸ್ಥಾನ, ಜಾತಿ ವಿಚಾರಗಳೇ ಚರ್ಚೆಯಾಗುತ್ತಿರುವುದು ವಿಷಾಕರ ಸಂಗತಿ. ದೇಶ ಸಾಕಷ್ಟು ಪ್ರಗತಿ ಕಾಣುತ್ತಿದ್ದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದಿಂದಾಗಿ. ಸಂವಿಧಾನದ ಆಶಯ, ರಚಿಸಿದ ಮಹನೀಯರ ಪರಿಶ್ರಮದ ಬಗ್ಗೆ ಯುವ ಜನಾಂಗದಲ್ಲಿ ಅರಿವು ಮೂಡಿಸಲು ಎಲ್ಲೆಡೆಯೂ ನಿರಂತರವಾಗಿ ಕಾರ್ಯಾಗಾರ ನಡೆಸುವ ಅಗತ್ಯ ಇದೆ’ ಎಂದರು.
ತಹಶೀಲ್ದಾರ್ ಎಂ.ಕುಮಾರಸ್ವಾಮಿ ಮಾತನಾಡಿ, ‘ಭಾರತದ ಪ್ರಜೆಗಳಲ್ಲಿ ಸಂವಿಧಾನದಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಮೂಲಭೂತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಸಂವಿಧಾನದ ದಿನದ ಆಶಯವಾಗಿದೆ. ಡಾ. ಬಿ.ಆರ್ ಅಂಬೇಡ್ಕರ್ ಅಪ್ರತಿಮ ಕೊಡುಗೆ ಸ್ಮರಿಸುವುದು ಮತ್ತು ಅವರಿಗೆ ಗೌರವ ಸಲ್ಲಿಸುವುದು ಇವತ್ತಿನ ಕಾರ್ಯಕ್ರಮದ ಸದುದ್ದೇಶವಾಗಿದೆ’ ಎಂದರು.
ಸ್ಥಳೀಯ ಶಾರದಾ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಬೀದಿನಾಟಕ ಜನರ ಗಮನ ಸೆಳೆಯಿತು.
ತಾಪಂ ಇಒ ಲಕ್ಷ್ಮೀದೇವಿ ಸಂವಿಧಾನ ಪೀಠಿಕೆ ಬೋಧಿಸಿದರು. ಚಂದ್ರಶೇಖರ ವಲ್ಕಂದಿನ್ನಿ ವಿಶೇಷ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸದಸ್ಯ ಹಿರೇಬಸಪ್ಪ ಸಜ್ಜನ್, ಬಿಇಒ ನಟೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸದಸ್ಯ ಸೋಮನಾಥ ದೊಡ್ಡಮನೆ, ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಮಲ್ಲಿಕಾರ್ಜುನ ತೊಂಡಿಹಾಳ, ಶರಣಪ್ಪ ಸೋಮಲಾಪುರ, ಖಾಜಾಹುಸೇನ್ ಮುಲ್ಲಾ, ಯಲ್ಲಪ್ಪ ಕಟ್ಟಿಮನಿ, ಮರಿಯಪ್ಪ ಸಾಲೋಣಿ, ಲಕ್ಷ್ಮಣ್, ಖಾಜಾಹುಸೇನ್ ಮುಲ್ಲಾ, ಸಿ.ಕೆ. ಮರಿಸ್ವಾಮಿ, ಹನುಮೇಶ್ ಮ್ಯಾಗಡಮನಿ, ಅಜ್ಮೀರ್ ಸಿಂಗನಾಳ, ಹುಲಿರಾಜ್ ತೊಂಡಿಹಾಳ, ಬಸವರಾಜ ಬಸವಣ್ಣಕ್ಯಾಂಪ್, ತಿಮ್ಮಣ್ಣ ನಾಯಕ, ಮಂಜುನಾಥ್ ಚಿಕೇನಕೊಪ್ಪ, ಹುಲುಗಪ್ಪ, ಗಂಗಪ್ಪ, ಶಿವಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.