ADVERTISEMENT

‘ಬೋಸ್‌ ವಿಚಾರಗಳನ್ನು ಮೈಗೂಡಿಸಿಕೊಳ್ಳಿ’: ಸಾಹಿತಿ ಡಾ. ಪ್ರವೀಣ ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 7:18 IST
Last Updated 22 ಜನವರಿ 2023, 7:18 IST
ಕೊಪ್ಪಳದಲ್ಲಿ ಶನಿವಾರ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮದಿನದ ಸಮಾರೋಪ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು
ಕೊಪ್ಪಳದಲ್ಲಿ ಶನಿವಾರ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮದಿನದ ಸಮಾರೋಪ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು   

ಕೊಪ್ಪಳ: ಸುಭಾಷಚಂದ್ರ ಬೋಸ್‌ ಅವರ ಜನ್ಮದಿನ ಆಚರಿಸಿದರಷ್ಟೇ ಸಾಲದು; ಅವರ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿ ಡಾ. ಪ್ರವೀಣ ಪಾಟೀಲ ಹೇಳಿದರು.

ನಗರದಲ್ಲಿ ಶನಿವಾರ ಎಐಡಿಎಸ್ಒ ವತಿಯಿಂದ ನಡೆದ ನೇತಾಜಿ ಸುಭಾಷ್ ಚಂದ್ರಬೋಸ್ aವರ 125ನೇ ಜನ್ಮದಿನದ ಸಮಾರೋಪ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ‘ವಿದ್ಯಾರ್ಥಿಗಳು ಹೆಚ್ಚು ವೈಚಾರಿಕವಾಗಿ ಯೋಚಿಸಬೇಕು. ನೇತಾಜಿ ಅವರು ಹೇಳಿದಂತೆಯೇ ಪ್ರತಿಯೊಂದು ಮೂಲೆಯಲ್ಲೂ ನಡೆಯುವ ಅನ್ಯಾಯವನ್ನು ಪ್ರಶ್ನಿಸುವ ಗುಣ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದರು.

ಎಐಡಿವೈಓ ರಾಜ್ಯ ನಾಯಕ ಶರಣು ಗಡ್ಡಿ ಮಾತನಾಡಿ ‘ಬೋಸ್‌ ಅವರ ವಿಚಾರಗಳು ಯುವಜನತೆಗೆ ಪ್ರೇರಣೆಯ ಕಥನಗಳಾಗಿವೆ. ಸ್ವತಂತ್ರ ಹೋರಾಟದಲ್ಲಿ ರಾಜೀ ರಹಿತ ಹೋರಾಟ ಮಾಡಿದ್ದರು. ತಮ್ಮ ಬಾಲ್ಯದಿಂದಲೂ ಇಡೀ ದೇಶದ ಜನರ ವಿಮುಕ್ತಿಗಾಗಿ, ಶೋಷಣೆಯಿಂದ ಹೋರಾಟ ಮಾಡಿದ್ದರು’ ಎಂದು ಸ್ಮರಿಸಿದರು.

ADVERTISEMENT

ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯು ನಡೆಸಿದ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಈಶ್ವರ ಪಾರ್ಕ್‌ನಿಂದ ಮೆರವಣಿಗೆ ನಡೆಯಿತು.

ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ನಾಟಕಕಾರ ಲಕ್ಷ್ಮಣ್ ಪೀರ್ಗಾರ್, ಸರ್ವೋದಯ ಐಟಿಐ ಕಾಲೇಜಿನ ಪ್ರಾಚಾರ್ಯ ನಿಂಗಪ್ಪ ಗದ್ದಿಗೇರಿ, ಕಾರ್ಯಕರ್ತರಾದ ಮನೋಜ್, ಭೀಮೇಶ್, ಶಿವಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.