ADVERTISEMENT

ಜೈನ ಮುನಿಗಳ ಚಾತುರ್ಮಾಸ: ಪುರಪ್ರವೇಶ

ಮುನಿಗಳಿಗೆ ಪೂರ್ಣಕುಂಭ ಸ್ವಾಗತ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 6:50 IST
Last Updated 21 ಜುಲೈ 2021, 6:50 IST
ಕೊಪ್ಪಳಕ್ಕೆ ಚಾತುರ್ಮಾಸದ ಪ್ರಯುಕ್ತ ಪಾದಯಾತ್ರೆಯ ಮೂಲಕ ಆಗಮಿಸಿದ ಜೈನ ಮುನಿ ನರೇಶಶ್ರೀಗಳ ನೇತೃತ್ವದ ಯತಿಗಳ ತಂಡಕ್ಕೆ ಸ್ವಾಗತ ಕೋರಲಾಯಿತು
ಕೊಪ್ಪಳಕ್ಕೆ ಚಾತುರ್ಮಾಸದ ಪ್ರಯುಕ್ತ ಪಾದಯಾತ್ರೆಯ ಮೂಲಕ ಆಗಮಿಸಿದ ಜೈನ ಮುನಿ ನರೇಶಶ್ರೀಗಳ ನೇತೃತ್ವದ ಯತಿಗಳ ತಂಡಕ್ಕೆ ಸ್ವಾಗತ ಕೋರಲಾಯಿತು   

ಕೊಪ್ಪಳ: ನಗರದ ಮಹಾವೀರ ಸಮುದಾಯ ಭವನದಲ್ಲಿ ಜೈನ ಸಮಾಜದ ಯತಿಗಳಾದ ನರೇಶ ಮುನಿಶ್ರೀ,ಶಾಲಿಭದ್ರಜೀ ಹಾಗೂ ಮಹಾಸಾಧ್ವಿ ಚಂದನಬಾಲಾಜೀ ಅವರಚಾತುರ್ಮಾಸ ಸಂಭ್ರಮದಿಂದ ಆರಂಭವಾಗಿದೆ.

ಶ್ರೀಗಳು ಕಾಲ್ನಡಿಗೆ ಮೂಲಕ ಜಿಲ್ಲೆಯನ್ನು ಪ್ರವೇಶ ಮಾಡಿದರು. ಪುರಪ್ರವೇಶದ ನಿಮಿತ್ತ ಸಮಾಜದ ಜನತೆ ಭಕ್ತಿಯಿಂದ ಮೆರವಣಿಗೆ ಮೂಲಕ ಸ್ವಾಗತಿಸಿದರು.

ಗುರು ಪುಷ್ಕರ ನರೇಶ ಸೇವಾ ಸಮಿತಿ ಹಾಗೂ ಜೈನ ಸಮಾಜದ ಮಹಿಳಾ ಸಂಘದಿಂದ ಪೂಜ್ಯರ ಚಾತುರ್ಮಾಸದ ಪ್ರವೇಶವನ್ನು ಧಾರ್ಮಿಕ ವಿಧಿವಿಧಾನಗಳಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ADVERTISEMENT

ನಂತರದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡಮಹೇಂದ್ರ ಚೋಪ್ರಾ,ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ರಾಜಶೇಖರ ಹಿಟ್ನಾಳ ಹಾಗೂಅಮರೇಶ ಕರಡಿ ಅವರು ಭಾಗವಹಿಸಿ ಶ್ರೀಗಳ ದರ್ಶನ ಪಡೆದರು.

ಸಮಾಜದ ಮುಖಂಡರಾದ ಬಾಬುಲಾಲ ಚೋಪ್ರಾ, ಅಶೋಕ ತಾಲೇಡಾ, ತಗರಾಜ ಪಾಲರೇಚಾ, ಮಾಂಗಿಲಾಲ ಚೋಪ್ರಾ, ಅಶೋಕ ಪಾರೀಖ,ಗೌತಮ ಧಾನೇಶಾ, ಅಮೃತಲಾಲ್ ಲುಂಕಡ, ಮಹೇಂದ್ರ ಜೋಗರಾಜ ಲುಂಕಡ, ರಾಕೇಶ, ವಿಮಲ, ಮಹಾವೀರ, ಹಿತೇಶ, ಮಹಾವೀರ ಭಂಡಾರಿ, ಮಹೇಂದ್ರ, ತೇರಾಪಂಥ ಸಮಾಜದ ಹಿರಿಯರಾದ ರಾಜು ಜೀರಾವಲಾ, ಪ್ರಮೋದ ಚೋಪ್ರಾ,ಪಾರಸ ಜೀರಾವಲಾ,ಮಹಾವೀರ ಸಂಕಲೇಚಾ ಇದ್ದರು.

ಅರಿಹಂತ ಮೆಹತಾ, ಸಂಜಯ ಮೆಹತಾ ಹಾಗೂ ಸಮಾಜದ ಯುವ ಮಿತ್ರರು ದಾಸೋಹದವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.